KARWAR.ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ  ಮಳೆ (RAIN) ವ್ಯಾಪಕವಾಗಿ ಸುರಿಯುತ್ತಿದೆ. ಗ್ರಾಮೀಣ ಭಾಗದ ಜನಜೀವನ ಅಸ್ತವ್ಯಸ್ತವಾಗಿದೆ.  ಮುನ್ನೆಚ್ಚರಿಕೆಯಾಗಿ  ಕುಮಟಾ ಮತ್ತು ಹೊನ್ನಾವರ ತಾಲ್ಲೂಕಿನ   ಶಾಲಾ ಕಾಲೇಜುಗಳಿಗೆ ನಾಳೆ(JULY 5th) ಶುಕ್ರವಾರ ರಜೆ (HOLIDAY ) ಘೋಷಿಸಲಾಗಿದೆ.

ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ಈಗಷ್ಟೇ  ರಜೆ ಘೋಷಿಸಿ  ಆದೇಶಿಸಿದ್ದಾರೆ. ಜುಲೈ 9ರವರೆಗೆ ಮಳೆ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ತಿಳಿಸಿದೆ.