ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Bangalore) : ಎಐಸಿಸಿ(AICC) ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್(K C Venugopal) ಅವರು ಶನಿವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಡಿ.ಕೆ ಶಿವಕುಮಾರ್(D K Shivakumar) ಅವರು ಆಯ್ಕೆಯಾಗಿದ್ದಾರೆಂದು ಶನಿವಾರ ಘೋಷಿಸಿದರು.
ಹೀಗಾಗಿ ಕರ್ನಾಟಕದ ಮುಖ್ಯಮಂತ್ರಿ(Karnataka Chief Minister) ಪಟ್ಟ ಅಲಂಕರಿಸಲು ಡಿ ಕೆ ಶಿವಕುಮಾರ(D K Shivakumar) ಅವರು ಸಜ್ಜಾಗಿದ್ದಾರೆ. ಶೀಘ್ರವೇ ರಾಜ್ಯಪಾಲರನ್ನು ಭೇಟಿ ಮಾಡಲಿರುವ ಅವರು ಸಿಎಂ ಪದಗ್ರಹಣದ ಮಹೂರ್ತ ನಿಗದಿಮಾಡಲಿದ್ದಾರೆ.
ವಿಧಾನಸೌಧದ(Vidhanasoudha) ಸಮ್ಮೇಳನ ಸಭಾಂಗಣದಲ್ಲಿ ಜರುಗಿದ ಮಹತ್ವದ ಸಭೆಯಲ್ಲಿ ನಿಯಮದಂತೆ ಮುಖ್ಯಮಂತ್ರಿಗಳ ರಾಜೀನಾಮೆ ಬಳಿಕ ಹೊಸ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ನಡೆಯಿತು. ಸಿಎಂ ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್ ಅವರ ಹೆಸರನ್ನು ಸೂಚಿಸಿದ್ದು, ಅದರಂತೆ ಆಯ್ಕೆ ಮಾಡಲಾಗಿದೆ.
ಹಿರಿಯ ನಾಯಕರು ಹಾಗೂ ಪಕ್ಷದ ಶಾಸಕರು ಡಿ ಕೆ ನಾಯಕತ್ವಕ್ಕೆ ಬೆಂಬಲಿಸಿದ್ದು ಜೂನ್ 3 ರಂದು ಮಧ್ಯಾಹ್ನ 4ಗಂಟೆ 6 ನಿಮಿಷಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದಾಗಿ ತಿಳಿದುಬಂದಿದೆ.
ಇದನ್ನು ಓದಿ : ಅಂಕೋಲಾದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, ಹಲವರಿಗೆ ಗಾಯ
