ಬೀದರ್ :  ಬೆಂಗಳೂರಿನ ಎನ್ಸಿಬಿ ತಂಡ ಹಾಗೂ ಬೀದರ್ ‌ಪೊಲೀಸರ ಸಂಯುಕ್ತ  ಕಾರ್ಯಚರಣೆಯಲ್ಲಿ 15 ಕೋಟಿ ಮೌಲ್ಯದ ಗಾಂಜಾ ಜಪ್ತಿ ಮಾಡಿದ ಘಟನೆ ನಡೆದಿದೆ.

ಓಡಿಶಾ ರಾಜ್ಯದ ಮಲ್ಕಾನ್ಗಿರಿ ಕಾಡಿನಿಂದ ಅಕ್ರಮವಾಗಿ ಗಾಂಜಾ ತುಂಬಿಕೊಂಡು ರಾಜ್ಯದ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಲಾರಿಯಲ್ಲಿ ಗಾಂಜಾ ಸಾಗಿಸಲಾಗುತಿತ್ತು.  ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ತಂಡ  ಗಾಂಜಾವನ್ನ ವಶಪಡಿಸಿಕೊಂದಿದೆ. ಈ ಸಂದರ್ಭದಲ್ಲಿ ಇಬ್ಬರನ್ನ ಬಂಧಿಸಲಾಗಿದೆ.

ಕಳ್ಳ ದಂದೆಯ ಬಗ್ಗೆ  ಖಚಿತ ಮಾಹಿತಿ ತಿಳಿದ ಬೆಂಗಳೂರಿನ ಎನ್ಸಿಬಿ ತಂಡ  ಔರಾದನ ವನಮಾರಪಳ್ಳಿ ಬಳಿ ಸಿಪಿಐ ರಘುವೀರಸಿಂಗ್ ನೇತೃತ್ವದಲ್ಲಿ  ದಾಳಿ ನಡೆಸಿತ್ತು. ಅಕ್ರಮ ದಂದೆಕೋರರು  ಲಾರಿಯಲ್ಲಿ ಸಿಮೆಂಟ್ ಇಟ್ಟಿಗೆ ಜೊತೆಗೆ ಒಳಗಡೆ ಗಾಂಜಾ ಪ್ಯಾಕೇಟ್ಗಳನ್ನು ಅಡಗಿಸಿಟ್ಟಿದ್ದರು.

ಪ್ರಕರಣದಲ್ಲಿ ಬೀದರನ ಹುಮನಾಬಾದ ತಾಲ್ಲೂಕಿನ ಹಂದಿಕೇರಾ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ..‌ ಸುಮಾರು 1500 ಕೆ.ಜಿ ಗಾಂಜಾ ಪತ್ತೆಯಾಗಿದ್ದು ಅಂದಾಜು 15 ಕೋಟಿ ರೂಪಾಯಿ ಮೌಲ್ಯ  ಎಂದು ಅಂದಾಜಿಸಲಾಗಿದೆ ಎಂದು ಎಸ್ಪಿ ಚೆನ್ನಬಸವಣ್ಣ ಲಂಗೋಟಿ ಮಾಹಿತಿ ನೀಡಿದ್ದಾರೆ.  ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.