ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi): ತಾಲೂಕಿನ ಬೆಣ್ಣೆಹೊಳೆ ಪಾಲ್ಸಗೆ (Bennehole Falls) ಪ್ರವಾಸಕ್ಕೆಂದು ಹೋಗಿದ್ದ ಶಿರಸಿ ಅರಣ್ಯ ಕಾಲೇಜಿನ(Sirsi Forest College) ವಿದ್ಯಾರ್ಥಿ ಮೃತ ದೇಹ ಪತ್ತೆಯಾಗಿದೆ(Body Found).
ಐದು ದಿನದ ಹಿಂದೆ ನಾಲ್ವರು ವಿದ್ಯಾರ್ಥಿಗಳು ಬೆಣ್ಣೆಹೊಳೆ ಫಾಲ್ಸ್ ಗೆ ಹೋಗಿದ್ದಾಗ ಇಬ್ಬರು ಕಾಲು ಜಾರಿ ಬಿದ್ದಿದ್ದರು. ಓರ್ವ ಕಲ್ಲು ಹಿಡಿದು ಬಚಾವಾಗಿದ್ದರೆ ಇನ್ನೋರ್ವ ನೀರುಪಾಲಾಗಿದ್ದ. ವಿಜಯಪುರ(Vijayapura) ಜಿಲ್ಲೆಯ ರಾಹುಲ್ ನಾಯಕ ನೀರುಪಾಲಾದ ದುರ್ದೈವಿ. ಕಳೆದ ಐದು ದಿನಗಳಿಂದ ಈತನ ಹುಡುಕಾಟ ನಡೆದು ಗುರುವಾರ ಸಂಜೆ ರಾಹುಲ್ ಮೃತದೇಹ ಘಟನೆ ನಡೆದ ಸ್ವಲ್ಪ ದೂರದಲ್ಲಿ ದೊರಕಿದೆ
ಶೋಧ ಕಾರ್ಯದಲ್ಲಿ ಜೋಯಿಡಾ ತಾಲೂಕಿನ ಪ್ರೈ ಕ್ಯಾಚರ್ ಅಡ್ವೆಂಚರ್ ಹೋಮ್ ಸ್ಟೇ ಯ ಈಜುಗಾರರು, ಮುಳುಗು ತಜ್ಞರು, ಈಶ್ವರ ಮಲ್ಪೆ ತಂಡದವರು ತೊಡಗಿದ್ದರು. ಕುಟುಂಬದವರಿಗೆ ಮೃತ ದೇಹ ರವಾನಿಸಲಾಗಿದೆ.
ಪ್ರೈ ಕ್ಯಾಚರ್ ಅಡ್ವೆಂಚರ್ ಹೋಮ ಸ್ಟೇ ನ ರಾಕೇಶ್, ರವಿ , ಹನೀಫ್, ಫಾರುಕ್, ಶಿರಸಿಯ ಮಾರಿಕಾಂಬಾ ಲೈಪ್ ಗಾರ್ಡ್ ನ ಗೋಪಾಲ ಗೌಡ ಹಾಗೂ ಸ್ಥಳೀಯ ಪೋಲಿಸರು ಮತ್ತು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಶೋಧ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಇದನ್ನು ಓದಿ : ಶಾಸಕ ಸತೀಶ್ ಸೈಲ್ ಗೆ ಮದ್ಯಂತರ ಜಾಮೀನು ಮಂಜೂರು.
ಶಿರಸಿ ಮಾರಿಕಾಂಬಾ ದೇವಾಲಯ ರಸ್ತೆ ಅಗಲೀಕರಣ ಯಾವಾಗ ಮಾಡುತ್ತೀರಿ? ಶಾಸಕರೇ, ಸಂಸದರೇ!

