ಶಿರಸಿ(Sirsi): ತಾಲೂಕಿನ ದಾಸನಕೊಪ್ಪದಲ್ಲಿ(Dasanakoppa) ಪ್ರಕೃತಿವಿಕೋಪದಿಂದ, ವಿಮಾ ಕಂಪನಿಯಿಂದ ಬರಬೇಕಾದ ಪರಿಹಾರಕ್ಕಾಗಿ ಮತ್ತು ರೈತರಿಗೆ ಸಿಗಬೇಕಾದ ವಿವಿಧ ಬೇಡಿಕೆ ಕುರಿತು ಮತ್ತು ಈವಾಗಿನ ರೈತರಿಗೆ ಸರಕಾರದಿಂದ ಆಗುತ್ತಿರುವ ಅನ್ಯಾಯದ ವಿರುದ್ದ ಶಿರಸಿ-ಹಾವೇರಿ ಹೆದ್ದಾರಿಯ(Sirsi-Haveri Highway) ದಾಸನಕೊಪ್ಪ ಸರ್ಕಲ್ ನಲ್ಲಿ ರಸ್ತೆ ಸಂಚಾರ ಬಂದ್ ಮಾಡಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬ್ರಹತ್ ಪ್ರತಿಭಟನೆ ನಡೆಸಿತು.
ಅಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕೆಂದು ಪಟ್ಟು ಹಿಡಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ರಾಘವೇಂದ್ರ ನಾಯ್ಕ, ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು, ಅತಿವೃಷ್ಟಿಯಿಂದ ಬೆಳೆಗಳು ಸಂಪೂರ್ಣ ನಾಶವಾಗಿದ್ದು ಬೆಳೆ ವಿಮೆ ಸಂಪೂರ್ಣ ನೀಡಬೇಕು ಮತ್ತು ಸರಕಾರ ರೈತರಿಗೆ ತಕ್ಷಣ ಅವರ ಬ್ಯಾಂಕ್ ಖಾತೆಗಳಿಗೆ ಪರಿಹಾರ ನೀಡಬೇಕು, ಶಿರಸಿ-ಹಾವೇರಿ ಹೆದ್ದಾರಿ ರಸ್ತೆಯನ್ನು ತಕ್ಷಣ ಪ್ರಾರಂಭಿಸಿ ಸಾರ್ವಜನಿಕರಿಗೆ, ರೈತರಿಗೆ ಸುಗಮವಾಗಿ ಸಂಚರಿಸಲು ಅನುಕೂಲ ಮಾಡಿಕೊಡಬೇಕು, ಅತಿಕ್ರಮಣದ ಹಕ್ಕುಪತ್ರ ನೀಡಬೇಕು, ಬತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕು, ಬದನಗೋಡು ಆಸ್ಪತ್ರೆಗೆ ಕಾಯಂ ಸರಕಾರಿ ವೈದ್ಯರನ್ನು ನೇಮಿಸಬೇಕು, ರೈತರಿಗೆ ಮೊದಲಿನಂತೆ ಕೃಷಿ ಪಂಪ್ ಶೆಟ್ಗಳಿಗೆ ವಿದ್ಯುತ್ ನೀಡಬೇಕು ಮತ್ತು ಮೀಟರ್ ಅಳವಡಿಸಬಾರದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪಧವಿಪೂರ್ವ ಕಾಲೇಜ್ ಪ್ರಾರಂಭಿಸಬೇಕೆಂದು ಆಗ್ರಹಿಸಿದರು.
ನಂತರ ಪ್ರತಿಭಟನಾ ಸ್ಥಳಕ್ಕೆ ಶಿರಸಿ ವಿಭಾಗಾಧಿಕಾರಿ ಕಾವ್ಯಾರಾಣಿ, ತಹಶೀಲ್ದಾರ ಶೀಧರ ಮುಂದಲಮನಿ, ತಾಲೂಕ ಪಂಚಾಯತ ಇಒ ಸತೀಶ ಹೆಗಡೆ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಧುಕರ ನಾಯ್ಕ, ಹೆಸ್ಕಾಂ ಸಹಾಯಕ ನಿರ್ವಾಹಣಾಧಿಕಾರಿ ನಾಗರಾಜ ಪಾಟೀಲ್, ಉಪ ವಲಯ ಅರಣ್ಯ ಅಧಿಕಾರಿ ಕಾರ್ತಿಕ ನಾರ್ವೇಕರ, ಡಿಎಸ್.ಪಿ ಕೆ.ಎಲ್ ಗಣೇಶ ಆಗಮಿಸಿದರು.
ನಂತರ ಎಸಿ ಅವರ ಮೂಲಕ ಬೇಡಿಕೆಗಳನ್ನು ಈಡೇರಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ತಾಲೂಕಾ ಅಧ್ಯಕ್ಷ ಪ್ರಮೋದ್ ಜಕ್ಲಣ್ಣನವರ, ನಾಗರಾಜ ಡಾಂಗೆ, ನವೀನ್ ಜಡೇದರ್, ಶ್ರೀಧರ್ ಪಾಟೀಲ್ , ಜಾಕೀರ ಹುಸೇನ್, ಅಕ್ಷಯ್ ಜಕ್ಲಣ್ಣನವ, ದೀಪಕ್ ಶೇಟ್, ಜಯಪುತ್ರ ಗುಡಿ, ಮುಂತಾದವರು ಉಪಸ್ಥಿತರಿದ್ದರು.