ಸಿದ್ದಾಪುರ (Siddapur) : ಇಕೋ ವಾಹನವೊಂದು ಉರುಳಿ ಬಿದ್ದು ಚಿತ್ರಕಲಾ ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಹೆಜಿನಿ ಗ್ರಾಮದ ಬಳಿ ಸಂಭವಿಸಿದೆ.

ಭಟ್ಕಳ (Bhatkal) ತಾಲೂಕಿನ ಬೈಲೂರು ಶಾಲೆಯ ಶಿಕ್ಷಕರಾದ ಮಂಜುನಾಥ ಅಣ್ಣಪ್ಪ ದೇವಾಡಿಗ ಮೃತರೆಂದು ಹೇಳಲಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಇನ್ನೂ ಐವರು  ಶಿಕ್ಷಕರು ಗಾಯಗೊಂಡಿದ್ದು ಸಂದೇಶ ಶೆಟ್ಟಿ, ನಾರಾಯಣ ಮೊಗೇರ, ಚನ್ನವಿರಪ್ಪ ಹೊಸಮನಿ, ಸಾದಿಕ್ ಶೇಖ ಹಾಗೂ ಮಹೇಶ ನಾಯ್ಕ ಎಂದು ಗುರುತಿಸಲಾಗಿದೆ.

ಗಾಯಗೊಂಡವರಿಗೆ ಸಿದ್ದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ(Siddapur Government Hospital) ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೇರೆಡೆ ಸ್ಥಳಾಂತರಿಸಲಾಗಿದೆ.

ಇವರೆಲ್ಲರೂ ದಾವಣಗೆರೆಗೆ (Davanagere) ಚಿತ್ರಕಲಾ ಗ್ರೇಡ್ ಪರೀಕ್ಷೆಯ ಮೌಲ್ಯಮಾಪನಕ್ಕೆಂದು ಇಕೋ ಕಾರಿನಲ್ಲಿ ತೆರಳುತ್ತಿದ್ದರು. ಹೊನ್ನಾವರದಿಂದ (Honnavar) ಮಾವಿನಗುಂಡಿ ಮಾರ್ಗವಾಗಿ(Mavinagundi Route) ಬುಧವಾರ ಮಧ್ಯಾಹ್ನ ಆರು ಶಿಕ್ಷಕರು ದಾವಣಗೆರೆಗೆ ಹೊರಟಿದ್ದರು. ಚಾಲಕನ ನಿಯಂತ್ರಣ ತಪ್ಪಿ ತಿರುವಿನಲ್ಲಿ ಕಾರು ರಸ್ತೆ ಪಕ್ಕದ ಹೊಂಡಕ್ಕೆ ಉರುಳಿ ಬಿದ್ದಿದೆ (Car Accident) ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಸಿದ್ದಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತ ಮಂಜುನಾಥ ಅಣ್ಣಪ್ಪ ದೇವಾಡಿಗ ಅತ್ಯಂತ ಕ್ರಿಯಾಶೀಲ ವ್ಯಕ್ತಿಯಾಗಿದ್ದು, ಸೃಜನಶೀಲ ಕಲಾವಿದರಾಗಿದ್ದರು. ಅವರು ಎಲ್ಲರೊಡನೆ ಸ್ನೇಹ ಭಾವದಿಂದ ನಗು ನಗುನಗುತ್ತಾ ಒಡನಾಡುತ್ತಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಭಿತ್ತಿ ಚಿತ್ರಗಳ ರಚನೆಯಲ್ಲಿ ಮತ್ತು ಶಿಕ್ಷಣ ಇಲಾಖೆಯ ಟ್ಯಾಬೋ ಗಳ ರಚನೆಯಲ್ಲಿ ಅವರ ಕೊಡುಗೆ ಅವಿಸ್ಮರಣೀಯ. ಅವರ ಆಕಸ್ಮಿಕ ಅಗಲಿಕೆ ನಿಜಕ್ಕೂ ದುಃಖದಾಯಕ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಅಗಲಿಕೆಯ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬದವರಿಗೆ ನೀಡಲಿ ಎಂದು ಶಿಕ್ಷಕ ವೃಂದ ಸಂತಾಪ ಸೂಚಿಸಿದೆ.

ಇದನ್ನು ಓದಿ : ಮುರ್ಡೇಶ್ವರ ಘಟನೆಗೆ ಸಿಎಂ ಸಂತಾಪ. ಶಿಕ್ಷಕರ ಅಮಾನತ್.

ಸಮುದ್ರ ಪಾಲದ ಮೂವರು ವಿದ್ಯಾರ್ಥಿನಿಯರು ಶವವಾಗಿ ಪತ್ತೆ.

ಮುರ್ಡೇಶ್ವರ ಕಡಲತೀರದಲ್ಲಿ ದುರಂತ. ಪ್ರವಾಸಕ್ಕೆ ಬಂದ ಶಾಲಾ ವಿದ್ಯಾರ್ಥಿನಿ ಸಾವು. ಮೂವರು ನಾಪತ್ತೆ.

ಸಾಹಿತ್ಯ ಸಮ್ಮೇಳನದಲ್ಲಿ ಮಾಂಸದೂಟಕ್ಕೆ ಬೇಡಿಕೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ವಿನೂತನ ಪ್ರತಿಭಟನೆ.