ಕಾರವಾರ(Karwar) : ಸರ್ಕಾರ ಬಸ್(Goverment Bus) ಪ್ರಯಾಣದ ದರ ಏರಿಸಿರೋದಕ್ಕೆ(Price Hike) ಮೊದಲ ದಿನವೇ ಪುರುಷ ಪ್ರಯಾಣಿಕರು ಬೊಬ್ಬೆ ಹೊಡೆದಿರೋದು ಸಾಮಾನ್ಯವಾಗಿತ್ತು.
ಶಕ್ತಿ ಯೋಜನೆಯ(Shakti Scheme) ಉಚಿತ ಬಸ್ ಪ್ರಯಾಣ ಮಾಡುತ್ತಿರುವ ಮಹಿಳಾ ಪ್ರಯಾಣಿಕರ ಮಧ್ಯೆ ಪುರುಷರು ಹೆಚ್ಚಿನ ಹಣ ಕೊಟ್ಟು ಟಿಕೆಟ್(Ticket) ಪಡೆಯುತ್ತಿರುವುದಕ್ಕೆ ಕಣ್ಣು ಕೆಂಪಗಾಗಿಸಿತ್ತು. ಸರ್ಕಾರ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕೊಟ್ಟು ನಮಗೆ ಪ್ರಯಾಣಿಸಲು ಹೆಚ್ಚಿಗೆ ಹಣ ಪಡೆಯುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಹೇಳಿದ್ದಾರೆ.
ಸರ್ಕಾರಕ್ಕೆ ಹೊರೆಯಾದರೆ ಮಹಿಳೆಯರ ಉಚಿತ ಬಸ್ ಯೋಜನೆ ವಾಪಾಸ್ ತೆಗೆದುಕೊಳ್ಳಿ ಎಂದು ಕೆಲವರು ಹೇಳುತ್ತಿದ್ದರೇ, ಇನ್ನೂ ಕೆಲವರು ಅಗತ್ಯವಿದ್ದವರಿಗೆ ಮಾತ್ರ ಪ್ರೀ ಕೊಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯಲ್ಲಿ(Uttarakannada District) ಬಸ್ ದರ ಏಷ್ಟಾಗಿದೆ ವಿವರ ಕೆಳಗಿದೆ ನೋಡಿ.
ಶಿರಸಿ-ಹುಬ್ಬಳ್ಳಿ 109 ಮೊದಲು 126 ಈಗ. 17ರೂ ಹೆಚ್ಚಳ.,
ಶಿರಸಿ-ಹಾವೇರಿ. 72 ಮೊದಲು 82 ಈಗ, 11ರೂ ಹೆಚ್ಚಳ.
ಶಿರಸಿ-ಸಾಗರ್-71ಮೊದಲು-82ಈಗ : 11ರೂ ಹೆಚ್ಚಳ
ಶಿರಸಿ-ಬನವಾಸಿ 34ಮೊದಲು 40ಈಗ : 6 ರೂ ಹೆಚ್ಚಳ
ಶಿರಸಿ-ಸಿದ್ದಾಪುರ.-45ಮೊದಲು 53ಈಗ :8ರೂ ಹೆಚ್ಚಳ
ಶಿರಸಿ-ಕಾರವಾರ:132ಮೊದಲು 152 ಈಗ : 20ರೂ ಹೆಚ್ಚಳ.
ಸಿದ್ದಾಪುರ-ಸಾಗರ 37ಮೊದಲು 43ಈಗ : 6ರೂ ಹೆಚ್ಚಳ.
ಸಿದ್ದಾಪುರ-ಸೊರಬ 34ಮೊದಲು 40ಈಗ : 6ರೂ ಹೆಚ್ಚಳ.
ಕುಮಟಾ-ಕಾರವಾರ 71ಮೊದಲು 82ಈಗ :11ರೂ ಹೆಚ್ಚಳ.
ಕುಮಟಾ-ಗೋಕರ್ಣ 37ಮೊದಲು 43ಈಗ : 5ರೂ ಹೆಚ್ಚಳ
ಕುಮಟಾ-ಭಟ್ಕಳ. -85ಮೊದಲು 96ಈಗ:11ರೂ ಹೆಚ್ಚಳ
ಕುಮಟಾ-ಹೊನ್ನಾವರ-45ಮೊದಲು 51ಈಗ :6ರೂ ಹೆಚ್ಚಳ
ಕುಮಟಾ-ಅಂಕೋಲಾ 45ಮೊದಲು 53 ಈಗ: 8ರೂ ಹೆಚ್ಚಳ.
ಹೊನ್ನಾವರ-ಗೇರಸೊಪ್ಪ-45ಮೊದಲು 53 ಈಗ :ರೂ ಹೆಚ್ಚಳ.
ಹೊನ್ನಾವರ-ಇಡಗುಂಜಿ – 28ಮೊದಲು 33ಈಗ :5ರೂ ಹೆಚ್ಚಳ
ಭಟ್ಕಳ-ಕಾರವಾರ – 175ಮೊದಲು 197ಈಗ :22ರೂ ಹೆಚ್ಚಳ
ಭಟ್ಕಳ-ಹೊನ್ನಾವರ. -51ಮೊದಲು -59ಈಗ :8ರೂ ಹೆಚ್ಚಳ.
ಭಟ್ಕಳ-ಶಿರಸಿ- 172ಮೊದಲು 198ಈಗ : 25ರೂ ಹೆಚ್ಚಳ
ಭಟ್ಕಳ-ಕುಮಟಾ. – 85ಮೊದಲು 96ಈಗ :16ರೂ ಹೆಚ್ಚಳ.
ಭಟ್ಕಳ-ಮುರ್ಡೇಶ್ವರ 28ಮೊದಲು 33ಈಗ :5ರೂ ಹೆಚ್ಚಳ.
ಭಟ್ಕಳ-ಕುಂದಾಪುರ 74 ಮೊದಲು 83ಈಗ : 9ರೂ ಹೆಚ್ಚಳ.
ಅಂಕೋಲಾ-ಗೋಕರ್ಣ – 28ಮೊದಲು- 33ಈಗ : 5ರೂ ಹೆಚ್ಚಳ.
ಅಂಕೋಲಾ-ಕುಮಟಾ-45 ಮೊದಲು 53ಈಗ : 8ರೂ ಹೆಚ್ಚಳ.
ಕಾರವಾರ-ಕದ್ರಾ-51ಮೊದಲು 59ಈಗ :8ರೂ ಹೆಚ್ಚಳ.
ಕಾರವಾರ-ಮಲ್ಲಾಪುರ- 40ಮೊದಲು 46ಈಗ :6ರೂ ಹೆಚ್ಚಳ.
ಯಲ್ಲಾಪುರ-ಶಿರಸಿ-57ಮೊದಲು 66ಈಗ : 9ರೂ ಹೆಚ್ಚಳ
ಯಲ್ಲಾಪುರ-ಹುಬ್ಬಳ್ಳಿ: 71ಮೊದಲು 82ಈಗ :11ರೂ ಹೆಚ್ಚಳ.
ಯಲ್ಲಾಪುರ-ಮುಂಡಗೋಡು :36 ಮೊದಲು 42 ಈಗ :6ರೂ ಹೆಚ್ಚಳ.
ಮುಂಡಗೋಡು-ಹುಬ್ಬಳ್ಳಿ- 51 ಮೊದಲು 59 ಈಗ : 8ರೂ ಹೆಚ್ಚಳ.
ಮುಂಡಗೋಡ-ಶಿರಸಿ – 61ಮೊದಲು 70 ಈಗ : 9ರೂ ಹೆಚ್ಚಳ.

