ಭಟ್ಕಳ (Bhatkal): ಹಿಂದುಗಳು ಹಾಗೂ ಹಿಂದು ಧಾರ್ಮಿಕ ಶ್ರದ್ದಾ ಕೇಂದ್ರ, ವ್ಯಾಪಾರ ವಹಿವಾಟು ಕೇಂದ್ರಗಳ ನಿರಂತರವಾಗಿ ಇಸ್ಲಾಮಿಕ್ ಮೂಲಭೂತವಾದಿಗಳಿಂದ ನಡೆಯುತ್ತಿರುವ ದಾಳಿ, ಲೂಟಿ, ಹತ್ಯೆ, ಹಲ್ಲೆ ಹಾಗೂ ಮಹಿಳೆಯರ ಮೇಲಿನ ಅಮಾನವೀಯ ದೌರ್ಜನ್ಯ ಖಂಡಿಸಿ ಡಿಸೆಂಬರ್ 13 ರಂದು ವಿಶ್ವ ಹಿಂದು ಪರಿಷತ್(Vishwa Hindu Parishat) ಮತ್ತು ಹಿಂದು ಜಾಗರಣ ವೇದಿಕೆ (Hindu Jagarana Vedike)ಭಟ್ಕಳ ಘಟಕ ಹಾಗೂ ಭಟ್ಕಳ ಸಮಸ್ತ ಹಿಂದು ಸಮಾಜದ ನೇತೃತ್ವದಲ್ಲಿ ಪ್ರತಿಭಟನಾ ಸಮಾವೇಶ ನಡೆಯಲಿದೆ.
ಅವರು ಇಲ್ಲಿನ ಪಟ್ಟಣದ ದಂಡಿನ ದುರ್ಗಾ ದೇವಸ್ಥಾನದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದು ಪರಿಷತ್ ಭಟ್ಕಳ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಸಂಚಾಲಕ ರಾಮಕ್ರಷ್ಣ ನಾಯ್ಕ ತಿಳಿಸಿದರು.
‘ಭಾರತದ ನೆರೆಯ ದೇಶ ಮತ್ತು ನಾವೇ ನಿರ್ಮಿಸಿಕೊಟ್ಟಂತಹ ಬಾಂಗ್ಲಾದೇಶದಲ್ಲಿ (Bangladesh) ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳ(Minority Hindus) ಮೇಲೆ 4 ತಿಂಗಳಿನಿಂದ ನಿರಂತರ ದಾಳಿ ಹಲ್ಲೆಗಳು ನಡೆಯುತ್ತಿವೆ. ಅಲ್ಲಿನ ಮಹಿಳೆಯರು, ಯುವತಿಯ ಮೇಲೆ ಅತ್ಯಾಚಾರ, ಅಲ್ಲಿನ ಹಿಂದು ದೇವಾಲಯದ ಮೇಲೆ ದಾಳಿ ಮತ್ತು ದ್ವಂಸಗಳಂತಹ ಕ್ರತ್ಯದಲ್ಲಿ ಅಲ್ಲಿನ ಮುಸ್ಲಿಂ ಸಮುದಾಯ ನಡೆಸುತ್ತಿದೆ. ಹಿಂದುಗಳನ್ನು ಕಂಡ ಕಂಡಲ್ಲಿ ದಾಳಿ ನಡೆಸಿ ಅವರನ್ನು ಹತ್ಯೆ ನಡೆಸುತ್ತಿದ್ದಾರೆ. ಇನ್ನು ಬಾಂಗ್ಲಾ ಇಸ್ಕಾನ್ ದೇವಾಲಯದ ಮುಖ್ಯಸ್ಥ ಹಾಗೂ ಸನ್ಯಾಸಿ ಚಿನ್ಮಯ ಕ್ರಷ್ಣದಾಸ ಅವರು ಅಲ್ಲಿನ ಕೇಸರಿ ಧ್ವಜ ಹಿಡಿದು ಪ್ರತಿಭಟನಾ ಮೆರವಣಿಗೆ ಮಾಡಿದ ಹಿನ್ನೆಲೆ ಅಕ್ರಮವಾಗಿ ಅಲ್ಲಿನ ಸರಕಾರ ಅವರನ್ನು ಬಂಧಿಸಿದೆ. ಅದನ್ನು ಖಂಡಿಸಿ ಹಿಂದುಗಳ ಪರವಾಗಿ ನಿಲ್ಲುವ ಹಿನ್ನೆಲೆಯಲ್ಲಿ ಡಿಸೆಂಬರ್ 13 ಶುಕ್ರವಾರದಂದು ಸಂಜೆ 4 ಗಂಟೆಗೆ ಇಲ್ಲಿನ ವಿಶ್ವ ಹಿಂದು ಪರಿಷತ್ ಮತ್ತು ಹಿಂದು ಜಾಗರಣ ವೇದಿಕೆ ಭಟ್ಕಳ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ.
ಚೆನ್ನಪಟ್ಟಣ ಶ್ರೀ ಹನುಮಂತ ದೇವಸ್ಥಾನದ ವಿನಾಯಕ ರಂಗ ಮಂಟಪದಿಂದ ಹೂವಿನಪೇಟೆ ರಸ್ತೆ, ಮುಖ್ಯ ಪೇಟೆ ರಸ್ತೆಯಿಂದ ಮಾರಿಗುಡಿ ದೇವಸ್ಥಾನದ ಮಾರ್ಗವಾಗಿ ಭಟ್ಕಳ ಮುಖ್ಯ ಸರ್ಕಲ್ ತನಕ ಬಂದು ಅಲ್ಲಿಂದ ಹಳೆ ಬಸ್ ನಿಲ್ದಾಣದ ರಿಕ್ಷಾ ಚಾಲಕ ಮಾಲಕರ ಗಣೇಶೋತ್ಸವ ವೇದಿಕೆಯ ತನಕ ಶಾಂತಿಯುತ ಬೃಹತ್ ಮೆರವಣಿಗೆ ನಡೆಯಲಿದೆ.
ರಿಕ್ಷಾ ಚಾಲಕ ಮಾಲಕರ ಗಣೇಶೋತ್ಸವ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ಮುಖ್ಯ ವಕ್ತಾರರ ದಿಕ್ಸೂಚಿ ಭಾಷಣ ಕಾರ್ಯಕ್ರಮದಲ್ಲಿ ಶ್ರೀ ರಾಜಶೇಖರಾನಂದ ವಜ್ರದೇಹಿ ಸಂಸ್ಥಾನದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಇರಲಿದ್ದು, ಅಧ್ಯಕ್ಷತೆಯನ್ನು ಭಟ್ಕಳ ವಿಶ್ವ ಹಿಂದು ಪರಿಷತ್ ಉಪಾಧ್ಯಕ್ಷ, ಹಿಂದು ಮುಖಂಡ ಗೋವಿಂದ ಎನ್. ಖಾರ್ವಿ ವಹಿಸಿಕೊಳ್ಳಲಿದ್ದಾರೆ.
ಡಿಸೆಂಬರ್ 13 ಶುಕ್ರವಾರದಂದು ಸಂಜೆ ತಾಲೂಕಿನ ಸಮಸ್ತ ಹಿಂದು ಸಮಾಜ ಬಾಂದವರು ಮಧ್ಯಾಹ್ನ ನಂತರ ತಮ್ಮೆಲ್ಲ ವ್ಯಾಪಾರ ವಹಿವಾಟು ಕೆಲಸ ಕಾರ್ಯಗಳನ್ನು ಸ್ವಯಂಪ್ರೇರಣೆಯಿಂದ ಸ್ಥಗಿತಗೊಳಿಸಿ ಸಂಘಟಿತ ಹಾಗೂ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು. ಮತ್ತು ಈ ಮೆರವಣಿಗೆಯಲ್ಲಿ ಮಹಿಳೆಯರು ಮತ್ತು ಯುವತಿಯರು ಸಹ ಭಾಗವಹಿಸಲಿದ್ದು ಬಾಂಗ್ಲಾದೇಶದಲ್ಲಿನ ಹಿಂದುಗಳ ದೌರ್ಜನ್ಯ ಖಂಡಿಸಿ ಅವರಿಗೆ ಧ್ವನಿಯಾಗಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಹಿಂದು ಜಾಗರಣ ವೇದಿಕೆ ಸಂಯೋಜಕ ಮತ್ತು ಕಾರ್ಯಕ್ರಮದ ಸಹ- ಸಂಚಾಲಕ ಜಯಂತ ನಾಯ್ಕ ಬೆಣಂದೂರು, ವಿಶ್ವ ಹಿಂದು ಪರಿಷತ್ ಉಪಾಧ್ಯಕ್ಷ ಗೋವಿಂದ ಖಾರ್ವಿ ಮತ್ತು ಭಾಸ್ಕರ ಆಚಾರ್ಯ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಶಿವಾನಂದ ದೇವಾಡಿಗ, ಭಜರಂಗ ದಳದ ಸಂಯೋಜಕ ದೀಪಕ ನಾಯ್ಕ, ವಿಶ್ವ ಹಿಂದು ಪರಿಷತ್ ಸದಸ್ಯ ಮೋಹನ ಶಿರಾಲಿಕರ, ರಾಮನಾಥ ಬಳಗಾರ, ಹಿಂದು ಜಾಗರಣ ವೇದಿಕೆ ಭಟ್ಕಳ ತಾಲ್ಲೂಕು ಸಹ ಸಂಚಾಲಕ ನಾಗೇಶ ನಾಯ್ಕ, ಕುಮಾರ ನಾಯ್ಕ, ರಾಘವೇಂದ್ರ ನಾಯ್ಕ, ಹಿಂದು ಸಂಘಟನೆ ಮುಖಂಡರಾದ ಶ್ರೀಕಾಂತ ನಾಯ್ಕ, ಪ್ರಮೋದ ಜೋಶಿ, ಮಹಾಲೆ ಸಮಾಜದ ಮುಖಂಡ ಜಗದೀಶ ಮಹಾಲೆ ಮುಂತಾದವರು ಇದ್ದರು.
ಇದನ್ನು ಓದಿ : ಸಾಹಿತ್ಯ ಸಮ್ಮೇಳನದಲ್ಲಿ ಮಾಂಸದೂಟಕ್ಕೆ ಬೇಡಿಕೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ವಿನೂತನ ಪ್ರತಿಭಟನೆ.
ಎಸ್ ಎಂ ಕೆ ನಿಧನ. ನಾಳೆ ರಾಜ್ಯಾದ್ಯಂತ ಸರ್ಕಾರಿ ರಜೆ.
ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಇನ್ನೂ ನೆನಪು ಮಾತ್ರ.
ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಹೊಂದಾಣಿಕೆ : ಪ್ರಣಾವಾನಂದ ಸ್ವಾಮಿ ಗಂಭೀರ ಆರೋಪ