ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಮಂಗಳೂರು/ಶಿವಮೊಗ್ಗ(Shivamogga) : ನಾಡಿನ ಹಿರಿಯ ಸಾಹಿತಿ ಡಾ ನಾ ಡಿಸೋಜ (Na Disoza) ರವಿವಾರ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.
ಇವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದರು. ಮಡಿಕೇರಿಯಲ್ಲಿ ನಡೆದ 80 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಮೃತರು ಪತ್ನಿ ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಸೋಮವಾರ ಸಂಜೆ ಅವರ ಹುಟ್ಟೂರಾದ ಸಾಗರದಲ್ಲಿ(Sagar) ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಮಂಗಳವಾರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿದೆ.
ಇದನ್ನು ಓದಿ : ಸರ್ಕಾರಿ ಬಸ್ ನಲ್ಲಿ ಬೊಬ್ಬೆಯೋ ಬೊಬ್ಬೆ. ನಿಮ್ಮೂರಲ್ಲಿ ಈಗ ಬಸ್ ದರವೆಷ್ಟು?
ನವಜಾತ ಮಕ್ಕಳು, ತಾಯಿ ಹತ್ಯೆಗೈದ ಮಾಜಿ ಸೈನಿಕರ ಬಂಧನ.
ಕಾರವಾರದಲ್ಲಿ ಕುದಿಯುವ ಎಣ್ಣೆಯಿಂದ ಬಿಸಿಬಿಸಿ ವಡೆ ತೆಗೆದು ಭಕ್ತಿಯ ಪರಾಕಾಷ್ಠೆ
ಮಂಗಳೂರಿನಲ್ಲಿ ಎನ್ಎಐ ಘಟಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಅಮಿತ್ ಶಾ ಭೇಟಿ.