ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi) : ತಾಲೂಕಿನ ಜಾಗ್ನಳ್ಳಿ ಸಮೀಪ ಬೆಳಗಿನ ಜಾವ ಓಮಿನಿ ಕಾರೊಂದು ಬೆಂಕಿಗೆ(Car Fire) ಆಹುತಿಯಾದ ಘಟನೆ ನಡೆದಿದೆ.
ಶಿರಸಿಯ ಜಾತ್ರೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಕಾರಿಗೆ ಬೆಂಕಿ(Car Fire) ಹೊತ್ತುಕೊಂಡ ತಕ್ಷಣ ಪ್ರಯಾಣಿಸುತ್ತಿದ್ದವರು ಸಮಯೋಚಿತವಾಗಿ ಹೊರಬಂದಿದ್ದರಿಂದ ಜೀವಾಪಾಯದಿಂದ ಪಾರಾಗಿದ್ದಾರೆ.
ಬೆಂಕಿಗಾಹುತಿಯಾದ ಓಮಿನಿ ಕಾರು(Omni Car) ಕುಳಿಕಟ್ಟುವಿನ ಬೀರಾ ಕೆರಿಯಾ ಗೌಡ ಅವರಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ(Fire Brigade) ಸಿಬ್ಬಂದಿಗಳು ಹರಸಾಹಸ ಪಟ್ಟು ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ(Police Station) ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನು ಓದಿ : ಇಂದು ಚಂದ್ರ ಗ್ರಹಣ. ದೇವಾಲಯದಲ್ಲಿ ಪೂಜಾ, ದರ್ಶನದಲ್ಲಿ ಬದಲಾವಣೆ.
ನಾನು ಹೆಬ್ಬೆಟ್ ಅಲ್ಲ. ಸ್ಟಡಿ ಮಾಡದೇ ಮಾತಾಡಲ್ಲ. ಸಚಿವ ಮಂಕಾಳ ವೈದ್ಯಗೆ ಟಾಂಗ್ ನೀಡಿದ ಶಾಸಕ ಸತೀಶ್ ಸೈಲ್.
