ದಾಂಡೇಲಿ(Dandeli) : ದಾಂಡೇಲಿ ಅರಣ್ಯದಲ್ಲಿ ಆನೆಗಳ(Elephant) ಹಿಂಡು ಹಿಂಡಾಗಿ ಓಡಾಡುತ್ತಿವೆ. ತಾಲ್ಲೂಕಿನ ಕರ್ಕಾ ಕ್ರಾಸ್(Karka Cross) ಹತ್ತಿರ ದಾಂಡೇಲಿ ಹಳಿಯಾಳ ರಾಜ್ಯ ಹೆದ್ದಾರಿಯಲ್ಲಿ(Dandeli-Haliyal State Highway) ಆನೆಗಳು ರಸ್ತೆ ದಾಟಿದ ಹೋದ ದೃಶ್ಯ ಮೊಬೈಲ್ ಲ್ಲಿ ಸೆರೆಯಾಗಿದೆ.
ದಾಂಡೇಲಿಯ ದಟ್ಟಾರಣ್ಯದಲ್ಲಿ(Dandeli Thick Forest) ಆನೆಗಳ(Elephant) ಓಡಾಟ ಸಾಮಾನ್ಯವಾಗಿದೆ. ನೀರು(Water), ಆಹಾರ(Food) ಅರಸಿ ಗಜಪಡೆ ಸಂಚಾರ ಮಾಡುತ್ತವೆ. ಅಲ್ಲಲ್ಲಿ ಬೆಳೆಗಳಿಗೆ ಹಾನಿ ಮಾಡಿ ಹೋಗುತ್ತವೆ.ಸಾಮಾನ್ಯವಾಗಿ ಹಳಿಯಾಳ, ದಾಂಡೇಲಿ, ಯಲ್ಲಾಪುರ, ಮುಂಡಗೋಡು ಭಾಗಗಳಲ್ಲಿ ಆನೆಗಳು ಪ್ರತಿವರ್ಷವೂ ಸಂಚಾರ ಮಾಡುತ್ತಿರುತ್ತದೆ. ಸಂಚಾರಿಸುವಾಗ ಆಗಾಗ ರಸ್ತೆ ದಾಟಿ ದಾರಿಹೋಕರಿಗೆ ದರ್ಶನ ನೀಡಿ ಸಾಗುತ್ತವೆ. ಕರ್ಕ ಬಳಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಆನೆಗಳ ರಸ್ತೆ ದಾಟಲು ಅನುವು ಮಾಡಿಕೊಟ್ಟಿದ್ದಾರೆ. ಸನ್ನಿವೇಶ ಆನೆ ನಡೆದಿದ್ದೆ ದಾರಿ ಎಂಬಂತಾಗಿತ್ತು.
ಇದನ್ನು ಓದಿ : ಬೈಂದೂರು ಪೊಲೀಸರಿಂದ ಎಸ್ಕೇಪ್. ಅಂಕೋಲಾ ಪೊಲೀಸರಿಗೆ ಲಾಕ್.
ಅಳಿಯಂದಿರಿಗೆ ಸಂಕ್ರಾಂತಿಗೆ ನೂರಾರು ಭಕ್ಷ್ಯಗಳು. ಈ ಮಾವ ಅತ್ತೆ ಎಲ್ಲರಿಗಿಂತ ಸೂಪರ್ ಕಣ್ರೀ.