ಅಂಕೋಲಾ ( Ankola) : ತಾಲೂಕಿನ ಶಿರೂರಿನಲ್ಲಿ (SHIRURU)ಸಂಭವಿಸಿದ ದುರಂತಕ್ಕೆ ಸಂಬಂಧಿಸಿ ಇಂದಿನಿಂದ ಪುನಃ  ಕಾರ್ಯಾಚರಣೆ ಆರಂಭವಾಗಲಿದೆ. ಈಗಾಗಲೇ ಗಂಗಾವಳಿ ನದಿಗೆ ಯಂತ್ರೋಪಕರಣಗಳು ಆಗಮಿಸಿವೆ.

ಮಹಾಮಳೆಯ ಜೊತೆಗೆ ನದಿಯ ನೀರಿನ ವೇಗದ ಕಾರಣಕ್ಕೆ  ಸ್ಥಗಿತಗೊಂಡಿದ್ದ ಕಾರ್ಯಾಚರಣೆ ತಿಂಗಳ ಬಳಿಕ ಮತ್ತೆ ಇಂದಿನಿಂದ ಮುಂದುವರಿಯಲಿದೆ. ನಿನ್ನೆ  ಭರತ ಮತ್ತು ಇಳಿತದ ವಾತಾವರಣ ನೋಡಿ ಸಮುದ್ರದಿಂದ ಗಂಗಾವಳಿ ನದಿಗೆ ಬಾರ್ಜ್, ಡ್ರೆಜಿಂಗ್ ಯಂತ್ರಗಳು ಪ್ರವೇಶಿಸಿವೆ.

ಶಿರೂರು ಸಮೀಪದ ಘಟನಾ ಸ್ಥಳ ಗಂಗಾವಳಿ ನದಿಯಲ್ಲಿ (GANGAVALI RIVER) ಬಾರ್ಜ್ ಮತ್ತು ಡ್ರೆಜ್ಜಿಂಗ್ ಯಂತ್ರಗಳ ಮೂಲಕ ಶೋಧ ನಡೆಯಲಿದೆ. 

 ಜುಲೈ 16ರಂದು ಬೆಳಿಗ್ಗೆ ಸಂಭವಿಸಿದ ದುರಂತದಿಂದ 11 ಜನರು ಮೃತರಾಗಿದ್ದರು. ಅದರಲ್ಲಿ ಎಂಟು ಜನರ ಮೃತದೇಹ ದೊರತಿತ್ತು. ರಕ್ಷಣಾ ತಂಡಗಳು ಸಾಕಷ್ಟು ಶ್ರಮಿಸಿದ್ದರೂ ಕೂಡ ಯಾವುದೇ ಪ್ರಯೋಜನ ಆಗಿರಲಿಲ್ಲ. ಇದೀಗ ಮೂವರ ಮೃತದೇಹ ಮತ್ತು ನದಿಯಲ್ಲಿ ಹುದುಗಿರುವ ಟ್ರಕ್ಗಳನ್ನ ತೆರವುಗೊಳಿಸಲು ಕಾರವಾರ ಶಾಸಕರಾದ ಸತೀಶ್ ಸೈಲ್(MLA SATISH SAIL) ಅವರ ಆಸಕ್ತಿಯಿಂದ ಈಗಾಗಲೇ ಬೃಹತ್ ಯಂತ್ರೋಪಕರಣಗಳು ಆಗಮಿಸಿವೆ. ಅಭಿಶೇನಿಯಾ ಒಸಿಯನ್ ಸರ್ವಿಸ್ ಕಂಪನಿಗೆ ಕಾರ್ಯಾಚರಣೆಯ ಗುತ್ತಿಗೆ ನೀಡಲಾಗಿದ್ದು, ಈಗಾಗಲೆ ಬಾರ್ಜ್, ಡ್ರೆಜ್ಜಿಂಗ್ ಯಂತ್ರ, ಇಟಾಚಿ, ಕ್ರೇನ್, ಮತ್ತು ಟಗ್ ಗಳು ಕೆಲಸ ನಿರ್ವಹಿಸಲಿದೆ. 

 ನಾಪತ್ತೆಯಾಗಿರುವ ಶಿರೂರಿನ ಜಗನ್ನಾಥ ನಾಯ್ಕ, ಗಂಗೆಕೊಳ್ಳದ ಲೋಕೇಶ ಹಾಗೂ ಕೇರಳದ ಅರ್ಜುನ್ ಮೃತದೇಹದ ಶೋಧ ನಡೆಯಲಿದ್ದು, ಅದೇ ರೀತಿ ನದಿಯಲ್ಲಿ ಬಿದ್ದಿರುವ ಟ್ರಕ್, ಮರಗಿಡಗಳನ್ನ ತೆರವುಗೊಳಿಸುವ ಕಾರ್ಯ ನಡೆಯಲಿದೆ. ಈಗಾಗಲೇ ಗಂಗಾವಳಿ ನದಿಯ ಸುಮಾರು ಏಳು ನೂರು ಮಿಟರ್ ಸುತ್ತಲಿನ ಪ್ರದೇಶಗಳ ಹೈಡ್ರೋಲಿಕ್ ಸರ್ವೆ(HAIDROLIC SERVE) ಮಾಡಲಾಗಿದೆ. ನದಿಯಲ್ಲಿ ಹೆಚ್ಚು ಆಳವಿರುವ ಸ್ಥಳಗಳಲ್ಲಿ ತೆಗೆದ ಮಣ್ಣನ್ನ ವಿಲೇವಾರಿ ಮಾಡಲಾಗುತ್ತದೆ. ನದಿಯಲ್ಲಿ ಸುಲಭವಾಗಿ ಕಾರ್ಯಚರಣೆ ನಡೆಸಲು ಈ ಯಂತ್ರಗಳ ಮೂಲಕ ಸಾಧ್ಯವಾಗಲಿದೆ. ಒಟ್ಟು ಎಂಟು ಕಾರ್ಮಿಕರು ಇವೆಲ್ಲ ಯಂತ್ರಗಳನ್ನ ಆಪರೇಟ್ ಮಾಡಲಿದ್ದಾರೆ. ಸುಮಾರು 10 ದಿನಗಳ ಕಾರ್ಯಾಚರಣೆ ಅಂದಾಜು ಮಾಡಲಾಗಿದೆ. ನಾಪತ್ತೆಯಾದವರ ದೇಹಕ್ಕಾಗಿ ಪ್ರಯತ್ನ ಸಾಗಲಿದೆ.
ಸದ್ಯ ಯಂತ್ರೋಪಕರಣಗಳ ಇನ್ನಿತರ ಭಾಗಗಳ ಜೋಡಿಸುವ ಕಾರ್ಯ ಆಗಲಿದ್ದು, ಇಂದು ಮಧ್ಯಾಹ್ನದ ಹೊತ್ತಿಗೆ ತೆರವು ಕಾರ್ಯಾಚರಣೆ ಆರಂಭವಾಗಲಿದೆ. ಇದು ಕೊನೆಯ ಪ್ರಯತ್ನ ವಾಗಲಿದೆ.

ಇದನ್ನು ಓದಿ : ಹಾಳಾದ ಹಾಲು ಮಾರಾಟ. ಗ್ರಾಹಕರ ಆಕ್ರೋಶ

ಅಕ್ರಮ ನಾಟಗಳ ವಶ. ಇಬ್ಬರ ಬಂಧನ

ದಾಂಡೇಲಿಯಲ್ಲಿ ಸರಣಿ ಕಳ್ಳತನ

ಭಟ್ಕಳದಲ್ಲಿ ಪ್ಯಾಲೇಸ್ಟೆನ್ ಧ್ವಜ ತೆರವು