ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಭಟ್ಕಳ(Bhatkal) : ತಾಲೂಕಿನ ತಲಗೇರಿಯ ಬಳಿ  ಗೋಗಳ್ಳರು(Cattle Thieves)  ಮಧ್ಯರಾತ್ರಿ ಹಸು ಕದಿಯಲು(Cow Theft) ಬಂದು  ಗ್ರಾಮಸ್ಥರ ಕೈಗೆ ಸಿಕ್ಕಿಬೀಳುವ ಭೀತಿಯಿಂದ ವಾಹನಗಳನ್ನು ಬಿಟ್ಟು ಪರಾರಿಯಾದ ಘಟನೆ ವರದಿಯಾಗಿದೆ.

ಶನಿವಾರ ಬೆಳಿಗ್ಗೆ ಸುಮಾರು 3:45 ರ ಹೊತ್ತಿಗೆ ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ(Swift) ಬಂದಿದ್ದ ಗೋಕಿರಾತಕರು, ಗೋವನ್ನು ಕದ್ದೊಯ್ಯಲು ಯತ್ನಿಸುತ್ತಿದ್ದಾಗ ತಲಗೇರಿಯ ವಿವೇಕಾನಂದ ನಗರದ(Talageri Vivekananda Nagar) ನಾಗರಿಕರು ಕಾರನ್ನು ಸುತ್ತುವರೆದಿದ್ದಾರೆ. ಈ ವೇಳೆ ಆರೋಪಿತರು  ಎದ್ದು ಬಿದ್ದು  ಕಾರಿನಲ್ಲೇ ತಮ್ಮ ಮೊಬೈಲ್ ಬಿಟ್ಟು ಕಗ್ಗತ್ತಲಲ್ಲಿ ಎಸ್ಕೇಪ್ ಆಗಿದ್ದಾರೆ.

ಬಳಿಕ  ಪಕ್ಕದ ಅರಣ್ಯ ಪ್ರದೇಶದಲ್ಲಿ(Forest Area) ಅವಿತುಕೊಂಡು,  ಮೊಬೈಲ್ ಕರೆ(Mobile Cal) ಮೂಲಕ ಮತ್ತೊಂದು ಗೋ ಕಳ್ಳರ ತಂಡಕ್ಕೆ ಮಾಹಿತಿ ರವಾನಿಸಿ  ಘಟನಾ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ.  ತಕ್ಷಣ ನಾಗರಿಕರು ಭಟ್ಕಳ ಪೊಲೀಸ್ ಠಾಣೆಗೆ(Bhatkal Police Station) ಮಾಹಿತಿ ನೀಡಿದ್ದಾರೆ.   ಈ ಸಂದರ್ಭದಲ್ಲಿ  ಪೊಲೀಸರು ಹಾಗೂ ನಾಗರಿಕರ ಜಂಟಿ ಕಾರ್ಯಾಚರಣೆ(Joint Operations) ಅರಿತ ದುಷ್ಕರ್ಮಿಗಳು   ತಾವು ತಂದಿದ್ದ ಬೈಕ್ ಅನ್ನು ಅಲ್ಲೇ ಬಿಟ್ಟು ಮತ್ತೆ ಪರಾರಿಯಾಗಿದ್ದಾರೆ. ಗೋಗಳ್ಳರ ಚೈನ್ ವ್ಯವಸ್ಥೆಯಿಂದ  (Chain System)  ಗ್ರಾಮಸ್ಥರೇ ಬೇಸ್ತು ಬೀಳುವಂತಾಯಿತು.

ಗೋಗಳ್ಳರು ಪೊಲೀಸರು ಹಾಗೂ ಸಾರ್ವಜನಿಕರ ಕಣ್ಣು ತಪ್ಪಿಸಲು ಸ್ವಿಫ್ಟ್ ಕಾರಿಗೆ ಅಸಲಿ ನಂಬರ್(Original Number) ಜೊತೆಗೆ, ಹಿಂದೂಗಳ ಹೆಸರಿರುವ ಮತ್ತೊಂದು ನಕಲಿ ನಂಬರ್ ಪ್ಲೇಟ್(Duplicate Number Plate) ಅಳವಡಿಸಿ ಜನರನ್ನು ದಿಕ್ಕುತಪ್ಪಿಸಲು ಯತ್ನಿಸಿರೋದು ಬೆಳಕಿಗೆ ಬಂದಿದೆ. 

ಭಟ್ಕಳ ತಾಲೂಕಿನಲ್ಲಿ(Bhatkal Taluku) ಕಳೆದ ಹಲವು ದಿನಗಳಿಂದ ಜಾಲಿ(Jali) ಮತ್ತು ತಲಗೇರಿ(Talageri) ಭಾಗದಲ್ಲಿ ಗೋವುಗಳ ಕಳ್ಳತನ(Cattle Theft) ಹೆಚ್ಚಾಗಿತ್ತು. ಗೋ ಕಳ್ಳರನ್ನು ಹಿಡಿಯಲೇಬೇಕು ಎಂದು ಗ್ರಾಮಸ್ಥರು ಶಪಥ ಮಾಡಿದ್ದರು. ಇದೀಗ ಅವರ ಯತ್ನ ಭಾಗಶಃ ಯಶಸ್ವಿಯಾಗಿದ್ದು, ದಿನನಿತ್ಯ ಸಾಕಿ ಸಲಹಿದ ಗೋವುಗಳನ್ನು ಕದ್ದೊಯ್ಯುತ್ತಿರುವ ಈ ಕಳ್ಳರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಪ್ರಕರಣ ಸಂಬಂಧ  ಸ್ಥಳದಲ್ಲಿ ವಾಹನಗಳು ಹಾಗೂ ಮೊಬೈಲ್ ವಶಪಡಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದು ತನಿಖೆ ಮುಂದುವರಿಸಿದ್ದಾರೆ.

ಇದನ್ನು ಓದಿ : ಅಕ್ರಮ ಮರಳು ಸಂಗ್ರಹ ಪ್ರದೇಶದ ಮೇಲೆ ಅಧಿಕಾರಿಗಳ ದಾಳಿ.

ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿ.  ಹಲವರಿಗೆ ಗಾಯ.