ಇ ಸಮಾಚಾರ ಡಿಜಿಟಲ್ನ್ಯೂಸ್ (esamachara digital news) ಭಟ್ಕಳ(Bhatkal) : ನೀರು ಕುಡಿಯುವ ನೆಪದಲ್ಲಿ ವೃದ್ಧೆಯೊಬ್ಬರ ಚಿನ್ನದ ಚೈನ್ ಎಗರಿಸಿ(Gold Chain Snatching) ದುಷ್ಕರ್ಮಿಗಳು ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆಯ(Bhatkal Taluku Belke) ಗರಡಿಹಿತ್ಲಿನಲ್ಲಿ ನಡೆದಿದೆ.
ಗರಡಿಹಿತ್ಲು ನಿವಾಸಿ ಹೊನ್ನಮ್ಮ ಮಹಾದೇವ ನಾಯ್ಕ (70) ಚೈನ್ ಕಳೆದುಕೊಂಡ ವೃದ್ಧೆಯಾಗಿದ್ದಾರೆ. ಜರ್ಸಿ ಹಾಗೂ ಮಾಸ್ಕ್(Jersey And Mask) ಧರಿಸಿದ್ದ ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು, ವಿಳಾಸ ಕೇಳುವ ನೆಪದಲ್ಲಿ ವೃದ್ಧೆಯನ್ನು ಸಂಪರ್ಕಿಸಿದ್ದಾರೆ. ತಾವು ಕೊರಿಯರ್ ಸಿಬ್ಬಂದಿ(Courier Staff) ಎಂದು ಪರಿಚಯಿಸಿಕೊಂಡು, ಯಾರೋ ವ್ಯಕ್ತಿಯ ಹೆಸರನ್ನು ಹೇಳಿ ಈ ವಿಳಾಸ(Adress) ಎಲ್ಲಿ ಎಂದು ಅಜ್ಜಿಯ ಬಳಿ ಪ್ರಶ್ನಿಸಿದ್ದಾರೆ.
ಅಂತಹ ವ್ಯಕ್ತಿ ಇಲ್ಲಿ ಯಾರೂ ಇಲ್ಲ ಎಂದು ಅಜ್ಜಿ ತಿಳಿಸಿದ ಬಳಿಕ, ದುಷ್ಕರ್ಮಿಗಳು ಕುಡಿಯಲು ನೀರು ಕೇಳಿದ್ದಾರೆ. ಅಜ್ಜಿ ಒಂದು ಪಾತ್ರೆಯಲ್ಲಿ ನೀರು ತಂದಿದ್ದು, ಅದನ್ನು ಕುಡಿದ ನಂತರ ಮತ್ತೆ ನೀರು ಬೇಕೆಂದು ಕೇಳಿದ್ದಾರೆ. ಅಜ್ಜಿ ಎರಡನೇ ಬಾರಿ ನೀರು ತರುವಷ್ಟರಲ್ಲಿ ಬೈಕ್‌ನ ಹಿಂಬದಿ ಕುಳಿತಿದ್ದ ದುಷ್ಕರ್ಮಿ ವೃದ್ಧೆಯ ಕುತ್ತಿಗೆಯಿಂದ ಚಿನ್ನದ ಚೈನ್(Gold Chain) ಎಳೆದಿದ್ದಾನೆ.
ಚೈನ್ ಎಳೆದ ರಭಸಕ್ಕೆ ಅಜ್ಜಿ ನೆಲಕ್ಕೆ ಬಿದ್ದಿದ್ದು, ಅದೇ ವೇಳೆ ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ(Escape). ಅಜ್ಜಿ ಕೂಗಾಡುತ್ತಿದ್ದಂತೆಯೇ ಸ್ಥಳೀಯರು ದುಷ್ಕರ್ಮಿಗಳನ್ನು ಬೆನ್ನಟ್ಟಿದರೂ, ಅವರು ಶಿರೂರು ಟೋಲ್‌ಗೇಟ್(Shiruru Tollgate) ಮೂಲಕ ಬೈಕ್‌ನಲ್ಲಿ ತಪ್ಪಿಸಿಕೊಂಡಿದ್ದಾರೆ.
ಘಟನೆಯ ಮಾಹಿತಿ ಪಡೆದ ತಕ್ಷಣ ಡಿವೈಎಸ್ಪಿ ಮಹೇಶ್, ಸಿಪಿಐ ಮಂಜುನಾಥ ಲಿಂಗಾರೆಡ್ಡಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ(Bhatkal Rural Police Station) ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ.
ಇದನ್ನು ಓದಿ : ನವೋದಯ ಪರೀಕ್ಷೆಯಲ್ಲಿ ಶಿಕ್ಷಕನಿಂದಲೇ ನಕಲು: ಪಾಲಕರ ಆಕ್ರೋಶ, ತೀವ್ರ ಪ್ರತಿಭಟನೆ
