ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal): ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66 ಕ್ವಾಲಿಟಿ ಹೋಟೆಲ್ ಎದುರು ಶಾಲಾ ವಾಹನ ಹಾಗೂ ಲಾರಿ ನಡುವೆ ಮುಖಾಮುಖಿ ಢಿಕ್ಕಿಯಾದ (Accident) ಘಟನೆ ಸೋಮವಾರ ಸಂಭವಿಸಿದೆ.
ಘಟನೆಯಲ್ಲಿ ಶಾಲಾ ವಾಹನ(School Van) ಚಾಲಕ ಹಾಗೂ ಮಹಿಳಾ ಕಂಡಕ್ಟರ್(Women Conductor) ಗಾಯಗೊಂಡಿದ್ದಾರೆ. ಭಟ್ಕಳ ಕಡೆಯಿಂದ ಮಂಗಳೂರು(Bhatkal to Mangalore) ಕಡೆಗೆ ಹೋಗುತ್ತಿದ್ದ ಲಾರಿ ಹಾಗೂ ಎದುರಿನಿಂದ ಬಂದ ಶಾಲಾ ವಾಹನಗಳ ನಡುವೆ ಈ ಅಪಘಾತ ಸಂಭವಿಸಿದೆ. ಅಂಜುಮನ ಪ್ರೈಮರಿ ಉರ್ದು ಸ್ಕೂಲ್ ಗೆ (Anjuman primary Urdu School) ಸೇರಿದ ಶಾಲಾ ವಾಹನವಾಗಿದೆ. ಅಪಘಾತದಲ್ಲಿ ಗಾಯಗೊಂಡಿರುವ ಶಾಲಾ ವಾಹನ ಚಾಲಕ ಹಾಗೂ ಮಹಿಳಾ ಕಂಡಕ್ಟರ್ ಅವರನ್ನ ತಕ್ಷಣ ಭಟ್ಕಳ ಸರ್ಕಾರಿ ಆಸ್ಪತ್ರೆಗೆ (Bhatkal Government Hospital) ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ವಿದ್ಯಾರ್ಥಿಗಳನ್ನು ಮನೆಗೆ ಬಿಟ್ಟು ಬರುವ ವೇಳೆ ಈ ಘಟನೆ ನಡೆದಿದ್ದರಿಂದ ಬಾರಿ ಅನಾಹುತ ತಪ್ಪಿದೆ. ಸ್ಥಳಕ್ಕೆ ಭಟ್ಕಳ ನಗರ ಠಾಣೆಯ ಪೊಲೀಸರು(Town station Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ : ಮೀನುಗಾರರ ಶಕ್ತಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಡಿ. ಬಂದರು ಯೋಜನೆ ವಿರುದ್ಧ ಗಣಪತಿ ಉಳ್ವೆಕರ್ ಗುಡುಗು.
ಸೂಟ್ ಕೇಸ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಮೃತದೇಹ.
ಪ್ರಮೀಳಾ ಪವಾರ ಗೆ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಗೌರವ
ಕಾರವಾರದಲ್ಲಿ ವಿಶ್ವ ಸ್ಕೌಟ್ ಡೇ ಮತ್ತು ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ.