ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ನಗರದ ಕಾರ್ ಸ್ಟ್ರೀಟ್(car Street) ಪಕ್ಕದಲ್ಲಿ ಆಫರ್ ನೀಡಿ ಗ್ರಾಹಕರನ್ನ ಆಕರ್ಷಿಸಿ ವಂಚನೆ ಮಾಡಿದ ವಂಚಕರಿಗೆ ಭಟ್ಕಳ ಪೊಲೀಸರು(Bhatkal Police) ಹೆಡೆ ಮುರಿ ಕಟ್ಟಿದ್ದಾರೆ.
“ಗ್ಲೋಬಲ್ ಎಂಟರ್ಪ್ರೈಸಸ್”(Global Enterprises) ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಂಚಕ ಜಾಲದ ಮೂವರನ್ನು ಭಟ್ಕಳ ಶಹರ ಪೊಲೀಸರು(Bhatkal Town Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಕೇರಳ(Keral) ಮತ್ತು ತಮಿಳುನಾಡು(Tamilunadu) ಮೂಲದ ಎಂ. ಗಣೇಶನ್, ತ್ಯಾಗರಾಜನ್, ಮತ್ತು ಮೈಯನಾದನ್ ಎಂದು ಗುರುತಿಸಲಾಗಿದೆ.
ಗೃಹೋಪಯೋಗಿ ವಸ್ತುಗಳ ಮೇಲೆ ಆಕರ್ಷಕ ರಿಯಾಯಿತಿ ನೀಡುವುದಾಗಿ ಹೇಳಿ ಭಟ್ಕಳದ ಜನರನ್ನ ಯಾಮಾರಿಸಿ ಲಕ್ಷಾಂತರ ರೂಪಾಯಿ ವಂಚಿಸಿದ್ದರು. ಎರಡು ತಿಂಗಳ ಹಿಂದೆ ಭಟ್ಕಳದ ಕಾರ್ ಸ್ಟ್ರೀಟ್ ರಸ್ತೆಯಲ್ಲಿ ಮಳಿಗೆಯನ್ನು ಆರಂಭಿಸಿದ ಆರೋಪಿಗಳು, “ಶೇ.40ರಷ್ಟು ರಿಯಾಯಿತಿ” ಎಂಬ ಆಕರ್ಷಕ ಆಫರ್ ನೀಡಿ ಜನರ ವಿಶ್ವಾಸ ಗಳಿಸಿದ್ದರು. ಪ್ರಾರಂಭದಲ್ಲಿ ಕೆಲವು ಗ್ರಾಹಕರಿಗೆ ಕಡಿಮೆ ಬೆಲೆಯ ವಸ್ತುಗಳನ್ನು ಪೂರೈಸಿ ನಂಬಿಕೆ ಬರುವಂತೆ ಮಾಡಿದ್ದರು. ಬಳಿಕ ನೂರಾರು ಜನರಿಂದ ಮುಂಗಡ ಹಣ ಸಂಗ್ರಹಿಸಿ – ಅಂಗಡಿಗೆ ಬೀಗ ಜಡಿದು ಪರಾರಿಯಾಗಿದ್ದರು.
ಈ ಆರೋಪಿಗಳು ಸ್ಥಳೀಯ ಬ್ಯಾಂಕ್ ಖಾತೆ ತೆರೆಯುವುದು, ಜಿಎಸ್ಟಿ ನೋಂದಣಿ ಮಾಡಿ ಸ್ಥಳೀಯರನ್ನೇ ಕೆಲಸಕ್ಕೆ ನೇಮಿಸುವುದು ಮುಂತಾದ ಕ್ರಮಗಳ ಮೂಲಕ ಸಂಸ್ಥೆಯನ್ನು ನಂಬಿಸಲು ಪ್ರಯತ್ನಿಸಿದ್ದರು. ಇವರ ವಂಚನೆ(Cheating) ಬಗ್ಗೆ ಸ್ಥಳೀಯರೊಬ್ಬರು ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಸಂತ್ರಸ್ತರು ಮಳಿಗೆಯ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ ನಂತರ ಪೊಲೀಸರು ತಂಡ ರಚಿಸಿದ್ದರು.
ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಮಹೇಶ ಎಂ ಕೆ ಹಾಗೂ ನಗರ ಠಾಣೆ ಇನ್ಸ್ಪೆಕ್ಟರ್ ದಿವಾಕರ ಪಿ ಎಂ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಮೂವರನ್ನೂ ಬಂಧಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪಿಎಸ್ಐ ನವೀನ ಎಸ್. ನಾಯ್ಕ ಮತ್ತು ತಿಮ್ಮಪ್ಪ ಎಸ್., ಹಾಗೂ ಸಿಬ್ಬಂದಿಗಳಾದ ವಿನಾಯಕ ಪಾಟೀಲ್, ದೀಪಕ ನಾಯ್ಕ, ದಿನೇಶ್ ನಾಯಕ, ದೇವು ನಾಯ್ಕ, ಮಹಾಂತೇಶ ಹಿರೇಮಠ, ಕಾಶಿನಾಥ ಕೊಟಗೊಣಸಿ, ಸುರೇಶ ಮರಾಠಿ, ರೇವಣಸಿದ್ದಪ್ಪ ಮಾಗಿ, ಕಿರಣ ಪಾಟೀಲ್, ಮತ್ತು ಸಚಿನ್ ಪವಾರ ಇದ್ದರು.
ಇದನ್ನು ಓದಿ : ಬ್ಯಾಂಕ್ ದರೋಡೆಗೆ ಯತ್ನ. ಸೈರನ್ ಕೂಗುತ್ತಿದ್ದಂತೆ ಕಾಲ್ಕಿತ್ತ ದರೋಡೆಕೋರರು.
ಶಾಸಕರ ಮನೆಗೆ ನುಗ್ಗಿದ ಚಿರತೆ. ರಾತ್ರೋರಾತ್ರಿ ಶ್ವಾನದ ಮರಿ ಕಣ್ಮರೆ.
ದೆಹಲಿಯಲ್ಲಿ ಸ್ಪೋಟ. ಉತ್ತರಕನ್ನಡ ಜಿಲ್ಲೆಯಲ್ಲಿ ಬಿಗಿ ಭದ್ರತೆ. ಶ್ವಾನದಳದಿಂದ ಪರಿಶೀಲನೆ

