ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ತಮಿಳುನಾಡು (Tamilunadu):  ಜಾಹೀರಾತು ನೋಡಿ ಆನ್‌ಲೈನ್‌ನಲ್ಲಿ ಸೀರೆ(Saree) ಬುಕ್ ಮಾಡಿದ್ದ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ವಂಚನೆಗೊಳಗಾದ ಬಗ್ಗೆ ವರದಿಯಾಗಿದೆ.

ಸಕಾಲ ಮಿಷನ್ ನಿರ್ದೇಶಕಿ ಪಲ್ಲವಿ ಅಕುರಾತಿ ವಂಚನೆಗೊಳಗಾಗಿರುವ ಅಧಿಕಾರಿ. ಅವರು ದೂರಿನ ನೀಡಿದ ಮೇರೆಗೆ ಪೂರ್ವ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ (CEN Police Station) ಪ್ರಕರಣ ದಾಖಲಾಗಿದೆ.

ತಮಿಳುನಾಡಿನ ಮಧುರೈ ಸುಂಗುಡಿ ಕಾಟನ್ ಸೀರೆ ಮಾರಾಟದ ಬಗ್ಗೆ ನಗರದ ಪೂರ್ಣಿಮಾ ಕಲೆಕ್ಷನ್ ವತಿಯಿಂದ ಮಾಡಲಾಗಿದ್ದ ವಿಡಿಯೋವನ್ನು ಯುಟ್ಯೂಬ್ ನಲ್ಲಿ ಪಲ್ಲವಿ ನೋಡಿದ್ದರು. ಬಳಿಕ ಸೀರೆ ಆಯ್ಕೆ ಮಾಡಿ, ಅದರ ಸ್ಟ್ರೀನ್ ಶಾಟ್ ಜೊತೆಗೆ ಆನ್‌ಲೈನ್ ಮೂಲಕ ಕಳೆದ ಮಾರ್ಚ್ 10ರಂದು ಗೂಗಲ್ ಪೇ ಮೂಲಕ 850 ರೂಪಾಯಿ ಪಾವತಿಸಿದ್ದರು. ಆದರೆ ಹಲವು ದಿನಗಳು ಕಳೆದರೂ  ಮನೆ ವಿಳಾಸಕ್ಕೆ ಸಂಬಂಧಪಟ್ಟವರು  ಸೀರೆ ಕಳುಹಿಸಲಿರಲಿಲ್ಲ. ಅಲ್ಲದೆ, ಹಣವನ್ನು ರಿಫಂಡ್ ಕೂಡ ಮಾಡಿರಲಿಲ್ಲ. ಕರೆ ಹಾಗೂ ಮೇಸೆಜ್ ಮಾಡಿದರೂ ಸ್ಪಂದಿಸಲಿಲ್ಲ. ಹೀಗಾಗಿ  ತಮಗೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಅಧಿಕಾರಿ ತಿಳಿಸಿದ್ದಾರೆ.

ಇದನ್ನು ಓದಿ : ರಸ್ತೆಯಲ್ಲಿ ಬಿದ್ದ 20 ಲಕ್ಷ ರೂ. ಬಂಗಾರ ಮರಳಿಸಿ ಮಾನವೀಯತೆ.

ಹೀನ ಕೃತ್ಯದ ಹಿಂದಿರುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ : ಪ್ರಧಾನಿ ಮೋದಿ ಗುಡುಗು