ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal): ರಸ್ತೆ ಮಧ್ಯೆದಲ್ಲಿ ಕಳೆದು ಹೋದ 20 ಲಕ್ಷದ ಬಂಗಾರದ ಆಭರಣಗಳನ್ನ (Gold Ornaments) ಹ್ಯಾಂಡ್ ಬ್ಯಾಗ್ ಸಮೇತ ವ್ಯಕ್ತಿಯೋರ್ವರು ಸಂಬಂಧಪಟ್ಟವರಿಗೆ ತಲುಪಿಸಿದ ಘಟನೆ ಭಟ್ಕಳದಲ್ಲಿ (Bhatkal) ನಡೆದಿದೆ.

ಏಪ್ರಿಲ್ 22ರ ಸಂಜೆ  ಫಾತಿಮಾ ಕೌಸರ್ ನಿಸಾರ್ ಅಹಮದ್ ರುಕ್ಮುದ್ದೀನ್ ಎಂಬುವವರು ಸುಲ್ತಾನ್ ಮಸೀದಿ ಹತ್ತಿರ ಇರುವ ತಮ್ಮ ವಾಸದ ಮನೆಯನ್ನು ಬೇರೆ ಕಡೆ ಶಿಫ್ಟ್ ಮಾಡಲು ಮುಂದಾಗಿದ್ದರು. ಮನೆಯ ಸಾಮಾಗ್ರಿಗಳಲ್ಲಿ ಇಟ್ಟಂತಹ ಸುಮಾರು 20 ಲಕ್ಷದ ಬಂಗಾರದ ಆಭರಣಗಳ ಹ್ಯಾಂಡ್ ಬ್ಯಾಗ್ ರಸ್ತೆ ಮಧ್ಯದಲ್ಲಿ ಕಳೆದು ಹೋಗಿತ್ತು.  ಅದೇ ರಸ್ತೆಯಲ್ಲಿ ಬರುತ್ತಿದ್ದ ಹುಸೇನ್ ಶೇಕ್  ಅವರಿಗೆ ಸಿಕ್ಕಿದ್ದವು.  ತಕ್ಷಣ  ಸಾಹಿಲ್ ಆನ್ಲೈನ್ (Sahil Online) ಮಾಧ್ಯಮದವರಿಗೆ ಕರೆ ಮಾಡಿ ತಿಳಿಸಿದ್ದರು. 

ಬುಧವಾರ ಬೆಳಗ್ಗೆ ಭಟ್ಕಳ ಶಹರ ಪೊಲೀಸ್ ಠಾಣೆಗೆ(Bhatkal Town Station) ಬಂದು ಅತ್ಯಂತ ಪ್ರಾಮಾಣಿಕತೆಯಿಂದ  ಸುಮಾರು 20 ಲಕ್ಷದ ಬಂಗಾರದ ಆಭರಣಗಳನ್ನು ಕಳೆದುಕೊಂಡ ಮಹಿಳೆಗೆ ತಲುಪಿಸಿದ್ದಾರೆ.  ಈ ಸಂದರ್ಭದಲ್ಲಿ ಪಿಎಸ್ಐ ನವೀನ್ ಎಸ್ ನಾಯ್ಕ, ಎಎಸ್ಐ  ರವಿ ನಾಯ್ಕ ಇವರ ಸಮ್ಮುಖದಲ್ಲಿ ಪ್ರಕ್ರಿಯೆ ನಡೆಸಲಾಗಿದೆ.

ಇದನ್ನು ಓದಿ : ಸತೀಶ್ ಕೊಳಂಬಕರ್ ಮರ್ಡರ್ ಮಿಸ್ಟ್ರಿ. ಪ್ರಕರಣದಲ್ಲಿ ಮೂವರು ಆರೆಸ್ಟ್.

ಹೀನ ಕೃತ್ಯದ ಹಿಂದಿರುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ : ಪ್ರಧಾನಿ ಮೋದಿ ಗುಡುಗು