ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ತಾಲೂಕಿನ  ಚಿತ್ತಾಕುಲ(Chittakula) ಗ್ರಾಮದ ಶಾಲಾಮಕ್ಕಳು ನಾಗರಿಕರು ಉಸಿರುಗಟ್ಟುವ ವಾತಾವರಣದಲ್ಲಿ ಕಾಲ ಕಳೆಯುತ್ತಿದ್ದಾರೆ. ಗ್ರಾಮಪಂಚಾಯತ್ ನ(Grama Panchayat) ಅಸಮರ್ಪಕ  ತ್ಯಾಜ್ಯ(Unscientific Waste) ವಿಲೇವಾರಿ ಯಿಂದ ತೊಂದರೆ ಉಂಟಾಗಿದೆ.

ಕಳೆದ ಆರೇಳು ವರ್ಷಗಳಿಂದ ಜನವಸತಿ ಪ್ರದೇಶಗಳಲ್ಲಿ ಗ್ರಾಮ ಪಂಚಾಯತ್ ಡಂಪಿಂಗ್ ಯಾರ್ಡ್(Dumping Yard) ಮಾಡಿದೆ. ಇಲ್ಲಿಯೆ ಹಳೆಯ ಕೆರೆ ಸಂಪೂರ್ಣ ತ್ಯಾಜ್ಯದಿಂದ ತುಂಬಿದೆ. ತ್ಯಾಜ್ಯದ ರಾಶಿಯಿಂದ ಬಾರೀ ದುರ್ವಾಸನೆ ಬರುತ್ತಿದ್ದು ಶಾಲಾಮಕ್ಕಳು, ಅಂಗನವಾಡಿ ಮಕ್ಕಳು ಅಸ್ವಸ್ಥರಾಗುತ್ತಿದ್ದಾರೆ.

ಇಲ್ಲಿ ಸಾಕಷ್ಟು ಮನೆಗಳಿವೆ. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ(Primary Health Center), ಅಂಗನವಾಡಿ ಮತ್ತು ಒಂದು ಸರ್ಕಾರಿ ಶಾಲೆ(Government School) ಮತ್ತು ಅನುದಾನಿತ ಶಾಲೆಯೊಂದಿದೆ. ಇಲ್ಲಿನ ಸದಾಶಿವಗಢ ಪ್ರೌಢಶಾಲೆಗಳ(Sadashuvagad Highschool) ಮಕ್ಕಳಿಗೆ ಉಸಿರಾಡಲು ಸರಿಯಾದ ಗಾಳಿ ಸಿಗುತ್ತಿಲ್ಲ. ಶಾಲೆಗೆ ಬರುವ ಮಕ್ಕಳು ಹಿಂಬದಿಯಿಂದ ಬರುವ ದುರ್ವಾಸನೆ ತಪ್ಪಿಸಲು ಕೊಠಡಿಯ ಕಿಟಕಿಗಳನ್ನ ಮುಚ್ಚಲಾಗುತ್ತಿದೆ. ಆದ್ರು ಕೂಡ ದುರ್ವಾಸನೆ ತಡೆಯಲು ಮೂಗಿ ಮುಚ್ಚಿ ಕುಳಿತು ಪಾಠ ಕೇಳಬೇಕಾಗಿದೆ.

ಇಲ್ಲಿನ ವ್ಯವಸ್ಥೆಯ ಬಗ್ಗೆ ಜನರ ಮನವಿಯನ್ನ ಕೇಳುವವರೆ ಇಲ್ಲದಂತಾಗಿದೆ. ಆರಂಭದಲ್ಲಿ ಇಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಮಾಡುವ ಮೊದಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಶಾಲಾಭಿವೃದ್ಧಿ ಸಮಿತಿಯಿಂದಲೂ ಆಕ್ಷೇಪಗಳು ವ್ಯಕ್ತವಾಗಿತ್ತು. ತ್ಯಾಜ್ಯ ವಿಲೇವಾರಿ ಘಟಕ ಸ್ಥಳಾಂತರಗೊಳಿಸುವಂತೆ ಸಾಕಷ್ಟು ಬಾರೀ ಮನವಿ ನೀಡಲಾಗಿದೆ. ಆದ್ರೆ ಯಾರೂ ಕೂಡ ಲಕ್ಷ್ಯ ಹಾಕಿಲ್ಲ. ಹೀಗಾಗಿ ಇಲ್ಲಿ ಅನಾರೋಗ್ಯದ ಭೀತಿ ಎದುರಾಗಿದೆ.

ಪರಿಸ್ಥಿತಿ ಹೀಗೆ ಮುಂದುವರಿದರೆ ನಾಗರಿಕರೇ ಊರು ಬಿಟ್ಟು‌ಹೋಗಬೇಕಾಗಿದೆ. ಇನ್ನಾದರೂ ಸಂಬಂಧಪಟ್ಟವರು ಜನರ ಆರೋಗ್ಯದ ದೃಷ್ಟಿಯಿಂದ ಯೋಚಿಸಬೇಕಾಗಿದೆ

ಇದನ್ನು ಓದಿ : ದೇವರ ವಿಷಯಕ್ಕೆ ಜಗಳ, ಮಹಿಳೆಯ ಕೊ* *ಮಾಡಿದ ಭಾವ.
*ಬೆಣ್ಣೆಹೊಳೆ ಪಾಲ್ಸನಲ್ಲಿ ನಾಪತ್ತೆಯಾದ ಯುವಕನ ಮೃತದೇಹ  ಪತ್ತೆ.


*