ಕಾರವಾರ(KARWAR) : ಪತ್ರಕರ್ತರು ಧ್ವನಿಯಿಲ್ಲದ ಜನಸಾಮಾನ್ಯರ ದನಿಯಾಗಿ ಕೆಲಸ ಮಾಡಿ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ(DC LAXMIPRIYA) ಹೇಳಿದರು.
ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ (DISTRICT PATRIKA BHAVAN) ಜರುಗಿದ ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿ, ಜಿಲ್ಲಾ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಸಂಪರ್ಕ ಇಲಾಖೆ ಸಂಯುಕ್ತಶ್ರಯದಲ್ಲಿ ಜರುಗಿದ ಪತ್ರಿಕಾ ದಿನಾಚರಣೆ(PATRIKA DAY) ಕಾರ್ಯಕ್ರಮದಲ್ಲಿ ಮಾತನಾಡಿದರು. ಜನರ ಸಮಸ್ಯೆಗಳನ್ನ ಗಮನಕ್ಕೆ ತಂದಲ್ಲಿ ನಾವೂ ಸಹ ಪೂರಕವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮವನ್ನ ಉದ್ಘಾಟಿಸಿದ ಕಾರವಾರ ಶಾಸಕ ಸತೀಶ್ ಸೈಲ್ ಅವರು, ಪತ್ರಕರ್ತರು ಹಗರಣಗಳನ್ನ ಹೊರತೆಗೆಯುವಲ್ಲಿ ಸಿಐಡಿ, ಸಿಬಿಐನಂತೆ ಕಾರ್ಯನಿರ್ವಹಿಸಿ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದು, ಶಿರೂರು ದುರಂತದಲ್ಲಿ ವಸ್ತುನಿಷ್ಠ ವರದಿಯ ಮೂಲಕ ಕಾರ್ಯಾಚರಣೆ ಸೂಕ್ತ ರೀತಿಯಲ್ಲಿ ನಡೆಯಲು ಸಹಕಾರಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಎಂಎಲ್‌ಸಿ ಗಣಪತಿ ಉಳ್ವೇಕರ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಟ್ಯಾಗೋರ್ ಪ್ರಶಸ್ತಿ(TAGORE AWARD) ಪ್ರಧಾನ :
ಪ್ರತಿ ವರ್ಷ ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತ ಸಂಘದಿಂದ ನೀಡುವ ಟ್ಯಾಗೋರ್ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ವಿಜಯ ಕರ್ನಾಟಕ ಪತ್ರಿಕೆ ಜಿಲ್ಲಾ ವರದಿಗಾರ ಪ್ರಮೋದ್ ಹರಿಕಂತ್ರ, ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ನವೀನ್ ಸಾಗರ, ವಿಸ್ತಾರ ನ್ಯೂಸ್ ಕ್ಯಾಮೆರಾಮನ್ ಸಾಯಿಕಿರಣ ಬಾಬ್ರೇಕರ್, ಹಾಗೂ ಸಂಯುಕ್ತ ಕರ್ನಾಟಕ ದಿನಪತ್ರಿಕೆ ಜಿಲ್ಲಾ ವರದಿಗಾರ ವಾಸುದೇವ ಗೌಡ ಅವರಿಗೆ ಟ್ಯಾಗೋರ್ ಪ್ರಶಸ್ತಿಯನ್ನ ಗಣ್ಯರು ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷರಾದ ಟಿ ಬಿ ಹರಿಕಾಂತ, ಜಿಲ್ಲಾ ವಾರ್ತಾಧಿಕಾರಿ ಶಿವಕುಮಾರ್, ನಿರ್ವಹಣಾ ಸಮಿತಿ ಉಪಾಧ್ಯಕ್ಷ ನಾಗರಾಜ್ ಹರಪನಹಳ್ಳಿ, ದರ್ಶನ್ ನಾಯ್ಕ ಉಪಸ್ಥಿತರಿದ್ದರು.
ಸುನೀಲ್ ಹಣಕೋಣ ಮತ್ತು ಸುಭಾಸ್ ದೂಪದಹೊಂಡ ಕಾರ್ಯಕ್ರಮ ನಿರ್ವಹಿಸಿದರು, ಅಧ್ಯಕ್ಷರಾದ ಟಿ ಬಿ ಹರಿಕಾಂತ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಗಣಪತಿ ಹೆಗಡೆ ವಂದಿಸಿದರು. ಕಾರವಾರದ ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಿದ್ದರು.
ಇದನ್ನು ಓದಿ : ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ಮನೆ ದೋಚಿದ ಕಳ್ಳರು