ಕಾರವಾರ(KARWAR) : ಉತ್ತರಕನ್ನಡ ಜಿಲ್ಲೆ ಕಂಡ ಅಪರೂಪದ ವ್ಯಕ್ತಿತ್ವ, ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದ, ಕೊಡುಗೈ ದಾನಿಯಾಗಿದ್ದ, ಅಜಾತಶತ್ರುವೆನಿಸಿಕೊಂಡ ರಾಜು ಎಲ್. ತಾಂಡೇಲ್ ಅವರ ನಿಧನ ಅರಗಿಸಿಕೊಳ್ಳಲಾಗುತ್ತಿಲ್ಲ.
ಉತ್ತರಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾಗಿ, ಚಿತ್ತಾಕುಲ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಕಾರವಾರ ಪರ್ಶಿನ್ ಬೋಟ್ ಯೂನಿಯನ್ ಅಧ್ಯಕ್ಷರಾಗಿ ಹೀಗೆ ನಾನಾ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದ ರಾಜು ಅವರಿಗೆ ನುಡಿ ನಮನ ಸಲ್ಲಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಉತ್ತರಕನ್ನಡ ಜಿಲ್ಲಾ ಮಟ್ಟದಲ್ಲಿ ನುಡಿನಮನ ಕಾರ್ಯಕ್ರಮ
ಆಗಸ್ಟ್ 31 ರಂದು ಶನಿವಾರ ಬೆಳಿಗ್ಗೆ 10.30 ಕ್ಕೆ ಕಾರವಾರ ಕೋಡಿಭಾಗ ಸಾಗರದರ್ಶನ್ ಸಭಾಭವನದಲ್ಲಿ ಏರ್ಪಡಿಸಲಾಗಿದೆ. ಜಾತಿ, ಧರ್ಮ ಮೀರಿ ಎಲ್ಲರನ್ನೂ ಪ್ರೀತಿಸುತ್ತಿದ್ದ ರಾಜು ತಾಂಡೇಲ್‌ರಿಗೆ ನುಡಿನಮನ ಸಲ್ಲಿಸಲು ಅವರ ಅಭಿಮಾನಿಗಳು ಆಗಮಿಸುವಂತೆ ಜಿಲ್ಲೆಯ ಸಮಸ್ತ ಮೀನುಗಾರ ಸಮುದಾಯದವರು ಮತ್ತು ರಾಜು ಎಲ್. ತಾಂಡೇಲ್ ಅಭಿಮಾನಿ ಬಳಗದವರು ಕೋರಿಕೊಂಡಿದ್ದಾರೆ.
ಇದನ್ನು ಓದಿ : ಕೇಂದ್ರದ ಹಣ ಬಿಡುಗಡೆ