ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) (Bangalore): ಹಸುಗಳ(Cow) ಕೆಚ್ಚಲು ಕೊಯ್ದು ಭಾರೀ ಗೋ ಪ್ರೇಮಿಗಳ ಆಕ್ರೋಶಕ್ಕೆ ಕಾರಣನಾಗಿದ್ದ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಾಮರಾಜಪೇಟೆಯ(Chamarajapet) ವಿನಾಯಕನಗರದಲ್ಲಿ(Vinayaknagar) ಶನಿವಾರ ವಿವಾದಕ್ಕೆ ಹುಟ್ಟು ಹಾಕಿದ್ದ ಪ್ರಕರಣವನ್ನು ಬೆಂಗಳೂರು ನಗರ ಪೊಲೀಸರು(Bangalore Police) ಆರೋಪಿಯನ್ನು ಒಂದೇ ದಿನದಲ್ಲಿ ಬಂಧಿಸುವ ಮೂಲಕ ಬೇಧಿಸಿದ್ದಾರೆ.
ರಾಜ್ಯಾದ್ಯಂತ ಈ ಅಮಾನವೀಯ ಕೃತ್ಯಕ್ಕೆ ಭಾರೀ ವಿರೋಧ ವ್ಯಕ್ತವಾದ ನಂತರ ಸಿಎಂ ಸಿದ್ದರಾಮಯ್ಯ(CM Siddaramaiha) ಅವರು ಆರೋಪಿ ಬಂಧಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ತಂಡ ರಚಿಸಿದ್ದ ಬೆಂಗಳೂರಿನ ಕಾಟನ್ ಪೇಟೆ ಠಾಣೆ ಪೊಲೀಸರು(Cotton Pete Police) ಆರೋಪಿಯನ್ನು ಬೆಂಗಳೂರಿನಲ್ಲಿಯೇ ಬಂಧಿಸಿದ್ದಾರೆ. ಬಿಹಾರದ(Bihar) ಚಂಪಾರಣ್ ಜಿಲ್ಲೆಯ ಶೇಕ್ ನಸ್ರು (30) ಬಂಧಿತ ಆರೋಪಿ. ಬಂಧಿತನ ವಿಚಾರಣೆಯನ್ನ ಪೊಲೀಸರು ಮುಂದುವರಿಸಿದ್ದಾರೆ.
ಸಿಸಿಕ್ಯಾಮರಾ ವಿಡಿಯೋ ಅಧರಿಸಿ ಪೊಲೀಸರು ವ್ಯಕ್ತಿಯ ಚಲನವಲನ ಆಧರಿಸಿ ಮಾಹಿತಿ ಕಲೆ ಹಾಕಿದ್ದರು. ಕೊನೆಗೆ ಶೇಕ್ ನಸ್ರು ಈ ಕೃತ್ಯ ಎಸಗಿರುವುದು ಮಾಹಿತಿಯಿಂದ ಖಚಿತವಾಗಿತ್ತು. ಆತನನ್ನು ವಾಸವಿದ್ದ ಮನೆಯಲ್ಲಿ ಬಂಧಿಸಲಾಗಿದೆ. ಪ್ಲಾಸ್ಟಿಕ್ ಹಾಗೂ ಬಟ್ಟೆಯ ಬ್ಯಾಗ್‌ಗಳನ್ನು ಹೊಲಿಯುವ ಅಂಗಡಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಆರೋಪಿ ಶೇಕ್ ನಸ್ರು ಕುಡಿದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾಗಿ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಇನ್ನಷ್ಟು ವಿಚಾರಣೆಯನ್ನೂ ಈ ಕುರಿತು ಪೊಲೀಸರು ಕಲೆ ಹಾಕುತ್ತಿದ್ದಾರೆ.
ಚಾಮರಾಜಪೇಟೆಯ ವಿನಾಯಕನಗರದಲ್ಲಿ (Vinayaknagar) ರಸ್ತೆ ಬದಿ ಶೆಡ್‌ನಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದ ಘಟನೆ ನಡೆದಿತ್ತು. ಹಸುಗಳ ಮಾಲೀಕ ನೀಡಿದ ದೂರಿನ ಅನ್ವಯ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 325 (ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ) ಕಾಯ್ದೆಯಡಿ ಕಾಟನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯ ವಿಚಾರಣೆ ನಡೆಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನು ಓದಿ : ಬೈಕ್ ಅಪಘಾತಪಡಿಸಿದ್ದಲ್ಲದೆ, ಮಾರಕ ಹಲ್ಲೆ. ಕಾರವಾರದಲ್ಲಿ ಹೆಚ್ಚಾಯ್ತು ನೌಕಾ ಸೈನಿಕರ ದೌರ್ಜನ್ಯ.
ಗ್ರಾಸಿಮ್ ಇಂಡಸ್ಟ್ರೀ ಸೋರಿಕೆ ಪ್ರಕರಣ. ಮುನ್ನೆಚ್ಚರಿಕೆಯಾಗಿ ನಿಷೇದಾಜ್ಞೆ ಜಾರಿ
. ಧಾರ್ಮಿಕ ಕಾರ್ಯ ಮುಗಿಸಿ ತೆರಳುತ್ತಿದ್ದ ಕುಟುಂಬದ ಕಾರು ಪಲ್ಟಿ : ದಂಪತಿ ದುರ್ಮರಣ.