ಕೋಲಾರ : ಪ್ರೀತಿಸಿ ಮದುವೆಯಾದ ವಧು ವರ ಇಬ್ಬರು ಮಚ್ಚಿನಿಂದ ಹೊಡೆದುಕೊಂಡು ಸಾವನ್ನಪ್ಪಿದ ಘಟನೆ ತಡವಾಗಿ ಗೊತ್ತಾಗಿದೆ.

ಕೋಲಾರ ಜಿಲ್ಲೆಯ ಕೆಜಿಎಫ್ (KGF) ತಾಲೂಕಿನ ಚಂಬರಸನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಂಬರಸನಹಳ್ಳಿ ಮೂಲದ ನವೀನ್ ಹಾಗೂ ಆಂಧ್ರ ಬೈನಪಲ್ಲಿ ಗ್ರಾಮದ ಲಿಖಿತಶ್ರೀ ಮೃತ ದುರ್ದೈವಿಗಳಾಗಿದ್ದಾರೆ.

ಮೃತರಿಬ್ಬರು ಕಳೆದ ಹಲವು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದು ಇಬ್ಬರು ಕುಟುಂಬದವರನ್ನ ಒಪ್ಪಿಸಿ ಅಗಸ್ಟ್ ಏಳರಂದು ಬೆಳಗ್ಗೆ ಎಲ್ಲರ ಮುಂದೆ ಹಸೆಮಣೆ ಏರಿದ್ದರು.

ಆದರೆ ಸಂಬಂಧಿಕರ ಮನೆಯಲ್ಲಿದ್ದ ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಮಚ್ಚಿನಿಂದ ಹಲ್ಲೆಯಾದ ಕಾರಣ ಪತ್ನಿ ಲಿಖಿತಾಶ್ರಿ ನಿನ್ನೆ ಸಾವನ್ನಪ್ಪಿದ್ದಳು. ಗಲಾಟೆ ಬಳಿಕ ಪತ್ನಿಗೆ ಮಚ್ಚಿನಿಂದ ಇರಿದು ಪತಿ ತಾನು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ತಿಳಿದು ಬಂದಿದೆ. ತೀವ್ರ ಗಾಯಾಗೊಂಡ ಪತಿ ನವೀನ ಕೂಡ ಚಿಕೆತ್ಸೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾನೆ.

ವಧುವಿನ ತಂದೆ ದೂರು ದಾಖಲಿಸಿದ್ದು, ವರ ನವೀನ್ ಮಚ್ಚಿನಿಂದ ವಧುವಿನ ಮೇಲೆ ಹಲ್ಲೆ ಮಾಡಿದ್ದು, ಬಳಿಕ ಎಲ್ಲರೂ ಬಾಗಿಲು ಮುರಿದು ಒಳಗೆ ಹೋದಾಗ ಆತನೂ ತನ್ನ ಮೇಲೆ ಹಲ್ಲೆ ಮಾಡಿಕೊಂಡಿದ್ದಾನೆಂದು ದೂರಿನಲ್ಲಿ ದಾಖಲಾಗಿದೆ ಎಂದು ತಿಳಿದುಬಂದಿದೆ. ಆಂಡರಸನ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.