ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ನಗರ ಠಾಣೆ ಪೊಲೀಸರು(Town Station Police) ಕ್ಷಿಪ್ರ ಕಾರ್ಯಾಚರಣೆ ನಡೆಸಿ ಗೋ ಕಳ್ಳತನ(Cow Theft) ಮಾಡಿದ್ದ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭಟ್ಕಳ ತಾಲೂಕಿನ(Bhatkal Taluku) ಪುರವರ್ಗದ(Puravarga) ನಿವಾಸಿಗಳಾದ ರೆಹಾನ್ (28) ಮತ್ತು ಫೈಜಾನ್ (25) ಬಂಧಿತರು. ಇನ್ನಿಬ್ಬರು ಪ್ರಕರಣದಲ್ಲಿ ಇರುವ ಸಾಧ್ಯತೆ ಇದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಚೆನ್ನಪಟ್ಟಣದ ಶ್ರೀ ಹನುಮಂತ ದೇವಸ್ಥಾನ(Chennapattana Sri Hanumanth Temple) ಆವರಣದಿಂದ ಬೆಳಿಗ್ಗೆ 3-15ರ ಸುಮಾರಿಗೆ ಆರೋಪಿಗಳು ಮಾರುತಿ ಸುಜುಕಿ ಫ್ರಾನ್ ಎಕ್ಸ್ (KA-20 MG-3324) ಕಾರಿನಲ್ಲಿ‌ ಗೋವು‌ ಕದ್ದು‌(Cow Theft) ಪರಾರಿಯಾಗಿದ್ದರು. ಕಾರಿನೊಳಗೆ ಗೋವನ್ನು ಹಿಂಸಾತ್ಮಕವಾಗಿ ಕದ್ದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ‌(CCTV) ದಾಖಲಾಗಿತ್ತು.

ಗೋವನ್ನು ಕದ್ದೊಯ್ದ ಕಳ್ಳರು ಮೂಢಭಟ್ಕಳ ಬೈಪಾಸ್(Mudbhatkal Bipass) ಮಾರ್ಗವಾಗಿ ಪರಾರಿಯಾಗಿದ್ದರೆಂಬ ಮಾಹಿತಿಯನ್ನ ಪೊಲೀಸರು ಕಲೆ ಹಾಕಿದ್ದರು. ವಿಡಿಯೋ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದ್ದರು. ಚನ್ನಪಟ್ಟಣ ದೇವಸ್ಥಾನ(Chennapattana Temple) ಆವರಣದಿಂದ ಈ ಹಿಂದೆ ಕೂಡ ಗೋ ಕಳ್ಳತನ ನಡೆದಿರುವ ಹಿನ್ನೆಲೆಯಲ್ಲಿ ಸ್ಥಳೀಯರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು.

ಸದ್ಯ ಭಟ್ಕಳ ನಗರ ಠಾಣಾ(Bhatkal Town Station) ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗಿದೆ. ಅಲ್ಲದೇ ಗೋ ಸಾಗಾಟ ಮತ್ತು ‌ಕಳ್ಳತನ ಕೃತ್ಯ ನಿಲ್ಲಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ಇದನ್ನು ಓದಿ : ಭಟ್ಕಳದಲ್ಲಿ ರಾಜಾರೋಷವಾಗಿ ಗೋ ಕಳ್ಳತನ. ದೇವಾಲಯದ ಪಕ್ಕದಲ್ಲೇ ಮತ್ತೆ ಕಳ್ಳರ ಅಟ್ಟಹಾಸ.

ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ: 29 ಪ್ರಯಾಣಿಕರಿಗೆ ಗಾಯ

ಮಲ್ಪೆ ಮೀನುಗಾರಿಕೆ ಬೋಟ್ ಗೋವಾದಲ್ಲಿ ವಶಕ್ಕೆ . ಕಠಿಣ ಕ್ರಮ ಕೈಗೊಳ್ಳಲು ‌ಮುಂದಾದ ಅಧಿಕಾರಿಗಳು.

ಕಾರವಾರದಲ್ಲಿ ಅಕ್ರಮ ಗೋ ಸಾಗಾಟ. ಇಬ್ಬರನ್ನು ರೆಡ್ ಹ್ಯಾಂಡಾಗಿ ಹಿಡಿದ ಸ್ಥಳೀಯರು. ಪೊಲೀಸ್ ವಶಕ್ಕೆ.