ಶಿರಸಿ(SIRSI) : ಚಿನ್ನ (GOLD) ನೀಡುವುದಾಗಿ ಹೇಳಿ ಕರೆಸಿ ಲಕ್ಷಾಂತರ ರೂಪಾಯಿ ಹಣ ದರೋಡೆ (ROBBERY) ಮಾಡಿದ ಘಟನೆ ಶಿರಸಿಯಲ್ಲಿ ನಡೆದಿದೆ.
ಕೇರಳದ(KERAL) ಮೂಲದ ವ್ಯಕ್ತಿಯೊರ್ವನಿಗೆ ಹಳೆ ಬಂಗಾರವನ್ನ ನೀಡುತ್ತೇವೆಂದು ಹೇಳಿದ್ದರು. ಸುಮಾರು 9 ಲಕ್ಷ ರೂಪಾಯಿಯೊಂದಿಗೆ ಚಿನ್ನದ ಉದ್ಯಮಿ ಸಚಿನ್ ಗಾಯಕ್ವಾಡ್ ಎಂಬಾತ ತನ್ನ ಇತರ ಇಬ್ಬರ ಜೊತೆ ಕೇರಳದಿಂದ ಕುಮಟಾದವರೆಗೆ ರೈಲಿನಲ್ಲಿ ಬಂದಿದ್ದ. ಬಳಿಕ ಬಸ್ ನಲ್ಲಿ ಮಳಲಗಾಂವ ಕ್ರಾಸ್ ಬಳಿ ಇಳಿದಿದ್ದರು.
ಕಾರಿನಲ್ಲಿ ಬಂದ ಆರು ಜನ ದುಷ್ಕರ್ಮಿಗಳು ಹಣ (MONEY) ಲಪಟಾಯಿಸಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಡಿಎಸ್ಪಿ ಕೆ.ಎಲ್ .ಗಣೇಶ, ಸಿ.ಪಿ.ಐ. ಶಶಿಕಾಂತ ವರ್ಮಾ ಭೇಟಿ ನೀಡಿದ್ದಾರೆ. ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ಯಲ್ಲಾಲಿಂಗ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ಸಿಬ್ಬಂದಿಗಳ (SPECIAL SQUAD) ತಂಡ ರಚಿಸಲಾಗಿದೆ. ಬನವಾಸಿ ಠಾಣಾ (BANAVASI STATION) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.