ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) : ನಗರದಮಹಿಳೆಯೊಬ್ಬಳು ಆನ್‌ಲೈನ್ ಪಾರ್ಟ್‌ಟೈಮ್ ಕೆಲಸದ(Online Part-time Job) ಹೆಸರಿನಲ್ಲಿ ಸೈಬರ್ ವಂಚಕರಿಂದ(Cyber Cheater’s) ಲಕ್ಷಾಂತರ ರೂ ಹಣ ಕಳೆದುಕೊಂಡ ಘಟನೆ ನಡೆದಿದೆ.

ಕಾರವಾರದ ಹೈಚರ್ಚ್ ರಸ್ತೆ(Karwar High church Road) ನಿವಾಸಿ ವರ್ಷಾ ವಿ. ರೇವಣಕರ್ (52) ಎಂಬುವವರು ಸುಮಾರು  7 ಲಕ್ಷ ರೂ. ಅಧಿಕ ಹಣ ಕಳೆದುಕೊಂಡು ಇದೀಗ ಪೊಲೀಸರ ಮೊರೆ ಹೋಗಿದ್ದಾರೆ. ಫೆಬ್ರವರಿ 24ರಂದು ವರ್ಷಾ ಅವರಿಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸಪ್ ಸಂದೇಶವೊಂದು(WhatsApp Message) ಬಂದಿತ್ತು. ಅದರಲ್ಲಿ ‘ಆನ್‌ಲೈನ್ ಪಾರ್ಟ್‌ಟೈಮ್ ಜಾಬ್’ ಇರುವ ಕುರಿತು ಮಾಹಿತಿ ನೀಡಲಾಗಿತ್ತು. ಸಂದೇಶದಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದಾಗ ಒಂದು ವೆಬ್‌ಸೈಟ್(Website) ತೆರೆದಿದ್ದು, ವಿವಿಧ ಕಂಪನಿಗಳ ಉತ್ಪನ್ನಗಳಿಗೆ ರೇಟಿಂಗ್ ಹಾಗೂ ರಿವ್ಯೂ ನೀಡುವ ಕೆಲಸ ಮಾಡಬೇಕೆಂದು ತಿಳಿಸಲಾಗಿತ್ತು. ಇದಕ್ಕೆ ಒಪ್ಪಿಕೊಂಡ ನಂತರ ವರ್ಷಾ ಅವರನ್ನು ‘VIP ELITE MEMBERSHIP GROUP’ ಎಂಬ ವಾಟ್ಸಪ್ ಗ್ರೂಪ್‌ಗೆ(WhatsApp Group) ಸೇರಿಸಲಾಯಿತು.

ಗ್ರೂಪ್‌ನ ಅಡ್ಮಿನ್ ಆಗಿದ್ದ ‘ಅನನ್ಯ’ ಎಂಬಾಕೆ ವಾಟ್ಸಪ್ ಕರೆ(WhatsApp Call) ಮಾಡಿ ಕೆಲಸದ ವಿವರಗಳನ್ನು ನೀಡಿದ್ದು, “ನಾವು ನೀಡುವ ಟಾಸ್ಕ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗುತ್ತದೆ” ಎಂದು ಆಮಿಷ ಒಡ್ಡಿದ್ದಳು. ಆರಂಭದಲ್ಲಿ ನಂಬಿಕೆ ಮೂಡಿಸಲು ವರ್ಷಾ ಅವರಿಂದ ₹200 ಹೂಡಿಕೆ ಮಾಡಿಸಿ, ಅವರ ಬ್ಯಾಂಕ್ ಖಾತೆಗೆ ₹300 ಮರಳಿ ಜಮೆ ಮಾಡಲಾಗಿತ್ತು. ಒಂದು ಟಾಸ್ಕ್‌ನಿಂದ ₹100 ಲಾಭ ಸಿಕ್ಕಿರುವುದರಿಂದ ವರ್ಷಾ ಅವರು ವಂಚಕರ ಮಾತನ್ನು ಸಂಪೂರ್ಣವಾಗಿ ನಂಬಿದರು.

ನಂತರ ಹಂತ ಹಂತವಾಗಿ ದೊಡ್ಡ ಮೊತ್ತ ಹೂಡಿಕೆ ಮಾಡಿದರೆ ಲಕ್ಷಾಂತರ ರೂಪಾಯಿ ಲಾಭ ಸಿಗಲಿದೆ ಎಂದು ನಂಬಿಸಿ, ಫೆಬ್ರವರಿ 27ರಿಂದ ಮಾರ್ಚ್ 2ರವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ(Bank Accounts) ಒಟ್ಟು ₹7,02,000 ಹಣ ವರ್ಗಾಯಿಸಲು ವಂಚಕರು ಪ್ರೇರೇಪಿಸಿದ್ದಾರೆ. ಆದರೆ ಇಷ್ಟು ದೊಡ್ಡ ಮೊತ್ತ ಪಡೆದ ಬಳಿಕ ಲಾಭದ ಹಣವನ್ನೂ ನೀಡದೆ, ಅಸಲು ಹಣವನ್ನೂ ಹಿಂದಿರುಗಿಸದೆ ವಂಚಕರು ಸಂಪರ್ಕ ಕಡಿತಗೊಳಿಸಿದ್ದಾರೆ.

ತಮ್ಮ ಮೇಲೆ ವಂಚನೆ ನಡೆದಿರುವುದು ತಿಳಿಯುತ್ತಿದ್ದಂತೆಯೇ ವರ್ಷಾ ಅವರು ಕಾರವಾರ ಸೈಬರ್ ಪೊಲೀಸ್ ಠಾಣೆಗೆ(Karwar Cyber Police Station) ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಐಟಿ ಕಾಯ್ದೆ 2000ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನು ಓದಿ : ಔಷಧಿ ಕುಡಿಯಲು ಹಿಂಜರಿದ ಬಾಲಕ. ಕ್ಷಣಾರ್ಧದಲ್ಲಿ ನಾಪತ್ತೆ. ನಾಲ್ಕು ತಾಸಿನ ಬಳಿಕ ಪತ್ತೆ.

ರೈಲಿನಲ್ಲಿ ನ್ಯಾಯಾಧೀಶರ ಪತ್ನಿ ಮೃತ ದೇಹ ಪತ್ತೆ.

ಶಾಸಕ ಸೈಲ್ ರಾಜೀನಾಮೆ ವಾಪಾಸ್. ಕಾರವಾರದಲ್ಲಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ.