ಇ ಸಮಚಾರ ಡಿಜಿಟಲ್ ನ್ಯೂಸ್ (esamachara digital news) : ಮೊಬೈಲಲ್ಲಿ ಅಡುಗೆ ತಯಾರಿ ಮಾಡುವುದನ್ನು ನೋಡುತ್ತಿದ್ದ ಯುವಕನೋರ್ವ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ನಡೆದಿದೆ.
ಕುದಿಯುವ ಎಣ್ಣೆಯ ಪಾತ್ರೆಗೆ ಬಿದ್ದು ಚಂದ್ರಪ್ರಕಾಶ್ ಎಂಬ ಯುವಕ ಸಾವನ್ನಪ್ಪಿದ್ದಾನೆ. ಚಂದ್ರಪ್ರಕಾಶ ನಿನ್ನೆ ಅಡುಗೆ ತಯಾರಿಸಲು ಮೊಬೈಲ್ ಫೋನ್ ಹಿಡಿದಿದ್ದಾಗ ಬಿಸಿ ಎಣ್ಣೆಯಲ್ಲಿ ಜಾರಿ ಬಿದ್ದಿದೆ. ಪರಿಣಾಮವಾಗಿ ಬ್ಯಾಟರಿ ಸ್ಫೋಟಗೊಂಡು ತೈಲ ಮತ್ತು ಬೆಂಕಿಯಿಂದ ತೀವ್ರ ಗಾಯಗೊಂಡಿದ್ದಾರೆ.
ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹೆಚ್ಚುವರಿ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗಾಗಿ ಒಯ್ಯುತ್ತಿದ್ದಾಗ ಚಂದ್ರಪ್ರಕಾಶ್ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಘಟನೆಯ ನಂತರ, ಲಹಾರ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 194 ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮೊಬೈಲ್ ಉಪಯೋಗಿಸುವವರಿಗೆ ಈ ಘಟನೆ ಎಚ್ಚರಿಕೆಯ ಗಂಟೆಯಾಗಿದೆ. ದಯವಿಟ್ಟು ಮೊಬೈಲ್ ಹಿಡಿದು ಬೆಂಕಿ ಹತ್ತಿರ ಹೋಗಬೇಡಿ ಎಂಬುದು ನಮ್ಮ ಕಳಕಳಿ.
ಇದನ್ನು ಓದಿ : ವಕ್ಪ್ ಗಲಾಟೆ ಉಲ್ಬಣ ಸಾಧ್ಯತೆ. ಸಿಎಂ ಸಭೆ.
ಲಾರಿ ಅಪಘಾತ. ಅಕ್ರಮ ಜಾನುವಾರು ಪತ್ತೆ. ಚಾಲಕ ಎಸ್ಕೇಪ್