ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಯಾಂತ್ರಿಕ ದೋಣಿಯಲ್ಲಿ ಆಕಸ್ಮಿಕ ಗ್ಯಾಸ್ ಸೋರಿಕೆ(Gas leakagr) ಉಂಟಾಗಿ ಸಿಲಿಂಡರ್ ಗೆ ಬೆಂಕಿ ಹೊತ್ತಿಕೊಂಡ ಘಟನೆ ಕಾರವಾರದ ಬೈತಖೋಲ್(Baitkol) ಬಂದರಿನಲ್ಲಿ ಸಂಭವಿಸಿದೆ.

ಶ್ರೀಲಕ್ಷ್ಮೀ ಹೆಸರಿನ ಬೋಟ್ ನಲ್ಲಿ ಈ ಅವಘಡ ಸಂಭವಿಸಿದೆ. ಶುಕ್ರವಾರ ಮೀನುಗಾರಿಕೆ ನಡೆಸಿ ಬೋಟ್(Fishing Boat) ವಾಪಸ್ಸಾಗಿತ್ತು. ಬಂದರಿನ ಸಮೀಪವೇ ಅಡುಗೆ ಮಾಡುತ್ತಿದ್ದ ವೇಳೆ ಬೋಟ್ ಒಳಗೆ ಇದ್ದ ಸಿಲಿಂಡರ್ ಗೆ ಬೆಂಕಿ ತಗುಲಿತು. ಕಾಣುತ್ತಿದ್ದಂತೆ ಬೆಂಕಿ ಆವರಿಸಿಬಿಟ್ಟಿತು. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಬೋಟಿನಲ್ಲಿದ್ದ ಐಸ್ ಮತ್ತು ನೀರು ಹಾಕಿ ನಂದಿಸುವ ಪ್ರಯತ್ನ ಮಾಡಿದರೂ ಆಗಲಿಲ್ಲ. ನಂತರ ಬಟ್ಟೆ ಮತ್ತು ಗೋಣಿಚೀಲವನ್ನ ಸಿಲಿಂಡರ್ ಗೆ ಹಾಕಿ ಸಿಲಿಂಡರ್ ನ್ನ ನೀರಿಗೆ ಬಿಸಾಕಲಾಯಿತು.

ಆದರೂ ಗ್ಯಾಸ್ ಸಿಲಿಂಡರ್ ಬೆಂಕಿಯಲ್ಲಿ ಉರಿಯುತಿತ್ತು. ಸ್ಥಳಕ್ಕೆ ಅಗ್ನಿಶಾಮಕ ದಳ(Fire Brigade) ಸಿಬ್ಬಂದಿಗಳು ದೌಡಾಯಿಸಿ ಬರುವಷ್ಟರಲ್ಲಿ ಬೆಂಕಿ ಆರಿ ಹೋಯಿತು. ಘಟನೆಯಲ್ಲಿ ದೋಣಿಯಲ್ಲಿದ್ದ ಬಲೆಗಳು ಹಾಗೂ ಬೋಟ್ ಗೆ ಅಳವಡಿಸಿದ ಸೈಡ್ ಟಯರ್ಗಳು ಸುಟ್ಟು ಹೋಗಿವೆ.

ಇದನ್ನು ಓದಿ : ಪ್ರಜ್ವಲ್ ರೇವಣ್ಣ ಪ್ರಕರಣ. ಸರ್ಕಾರದ ಪರ  ವಾದಿಸಿದ ಅಂಕೋಲೆಯ ಅಶೋಕ ನಾಯ್ಕ.

ಮಿಂಚಿ ಮರೆಯಾದ ಕಾಮಿಡಿ ಕಿಲಾಡಿ ಕಲಾವಿದ.

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಶಾಕ್. ದೋಷಿ ಎಂದು ತೀರ್ಪು.