ಕಾರವಾರ(Karwar) : ರಾಜ್ಯದ ಜನತೆ 2025ರ ನೂತನ ವರ್ಷವನ್ನ ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಕಾರವಾರದ ಕಡಲತೀರದಲ್ಲಿ (Karwar Beach) ಸಾಗರೋಪಾದಿಯಲ್ಲಿ ಸೇರಿದ ಜನತೆ ಖುಷಿಯಲ್ಲಿ ಮಿಂದೆದ್ದರು.

ಡಿಸೆಂಬರ್ 31ರ ರಾತ್ರಿ 9 ಗಂಟೆಯಿಂದಲೇ ಕಾರವಾರದ ರವೀಂದ್ರನಾಥ್ ಟ್ಯಾಗೋರ್ ಕಡಲತೀರದಲ್ಲಿ (Rabindranath Tagore Beach) ಜನ ಜಮಾಯಿಸತೊಡಗಿದರು. ಕುಟುಂಬ ಸಮೇತ ಜನತೆ ಊಟ ತಿಂಡಿಗಳನ್ನ ತಂದು ಒಟ್ಟಾರೆ ಕುಳಿತು ತಿನ್ನತೊಡಗಿದರು.  ಇನ್ನೊಂದೆಡೆ ಸಂಗೀತಕ್ಕೆ  ಮಹಿಳೆಯರು, ಸ್ಟೆಪ್ ಹಾಕುತ್ತಿರುವುದು ಕಂಡುಬಂತು. ಅಲ್ಲದೇ ಆಕಾಶ  ಗೂಡುದೀಪವನ್ನ ಆಗಸಕ್ಕೆ ಹಾರೈಸುತ್ತ ಕಾಲ ಕಳೆದರು. ರಾತ್ರಿ 12 ಗಂಟೆಯಾಗುತ್ತಿದ್ದಂತೆ ಸಿಡಿಮದ್ದು ಸುಟ್ಟು ಸಂಭ್ರಮಿಸಿದರು. ಹ್ಯಾಪಿ ನ್ಯೂ ಇಯರ್ ಕೂಗುತ್ತಾ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಇನ್ನೊಂದೆಡೆ ನಗರದ ಇಡನ್ ಹೋಟೆಲ್ ನಲ್ಲಿ ಈ ಬಾರೀ ಮೊದಲ ಬಾರಿಗೆ ನ್ಯೂ ಇಯರ್ ಸೆಲೆಬ್ರೇಶನ್(New Year Celebration) ಆಚರಿಸಲಾಯಿತು. ಸಂಗೀತಕ್ಕೆ ಮಹಿಳೆಯರು, ಮಕ್ಕಳು ಕುಣಿದು ಕುಪ್ಪಳಿಸಿದರು.

ಇದನ್ನು ಓದಿ : ಬರೋಬ್ಬರಿ ಮೂರುವರೆ ಲಕ್ಷ ರೂಪಾಯಿಗೆ ಮಾರುತಿ ದೇವರ ಪ್ರಸಾದ ಸ್ವೀಕರಿಸಿದ ಭಕ್ತ.

ಹೊನ್ನಾವರದಲ್ಲಿ ಬೆಳಂಬೆಳಿಗ್ಗೆ ಭೀಕರ ಅಪಘಾತ. ಮೂವರ ದುರ್ಮರಣ.