ಅಂಕೋಲಾ(ANKOLA) :  ಅಂಕೋಲಾದ ಶಿರೂರಿನಲ್ಲಿ ಮೂರನೇ ಹಂತದ ಕಾರ್ಯಾಚರಣೆ(OPERATION)  ಶುಕ್ರವಾರ ಸಂಜೆ ಆರಂಭವಾಗಿದೆ.  ಶಾಸಕರಾದ ಸತೀಶ್ ಸೈಲ್  (MLA SATISH SAIL) ಯಂತ್ರೋಪಕರಣಗಳಿಗೆ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.

ಕಳೆದ ಜುಲೈ  16ರಂದು ಬೆಳಿಗ್ಗೆ ಗುಡ್ಡ ಕುಸಿತ (LANDSLIDE) ಸಂಭವಿಸಿ  11 ಜನರು ಮೃತರಾಗಿದ್ದರು. ಒಟ್ಟು ಎಂಟು ಜನರ ಮೃತದೇಹ ಗೋಕರ್ಣ(GOKARN) ಸಮೀಪದ ಕಡಲತೀರದಲ್ಲಿ ಲಭಿಸಿತ್ತು. ರಕ್ಷಣಾ ತಂಡಗಳು ಸಾಕಷ್ಟು ಶ್ರಮಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ಮೂವರ ಮೃತದೇಹ ಮತ್ತು ನದಿಯಲ್ಲಿ ಹುದುಗಿರುವ ಟ್ರಕ್ಗಳನ್ನ ತೆರವುಗೊಳಿಸುವ ಕಾರ್ಯ ನಡೆಸಲಾಗಿದೆ.

ಗೋವಾದ ಪಣಜಿಯಿಂದ (GOA PANAJI) ಹೂಪರ್ ಬಾರ್ಜ್, ಡ್ರೆಜ್ಜಿಂಗ್ ಯಂತ್ರ, ಇಟಾಚಿ, ಕ್ರೇನ್, ಮತ್ತು ಟಗ್ ಗಳು ಘಟನಾ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಶುರು ಮಾಡಿವೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ (DC LAKSHMIPRIYA), ಎಸ್ಪಿ ನಾರಾಯಣ ಎಂ (SP NARAYAN) ಅವರು  ಬಾರ್ಜ್ ಯಂತ್ರಗಳ ಮೇಲೆ ನಿಂತು ಘಟನಾ ಸ್ಥಳಕ್ಕೆ ಆಗಮಿಸಿ ಆರಂಭದ ಕೆಲಸಗಳನ್ನು ವೀಕ್ಷಿಸಿದರು. ಈ ವೇಳೆ ಇಟಾಚಿ ಯಂತ್ರಕ್ಕೆ ಮರದ ದಿಮ್ಮಿ ಹಾಗೂ ಉದ್ದನೆಯ ರಾಡ್ ಒಂದು ಪತ್ತೆಯಾಗಿದೆ.

ದುರಂತದಲ್ಲಿ ನಾಪತ್ತೆಯಾಗಿರುವ ಶಿರೂರಿನ ಜಗನ್ನಾಥ ನಾಯ್ಕ, ಗಂಗೆಕೊಳ್ಳದ ಲೋಕೇಶ ಹಾಗೂ ಕೇರಳದ ಅರ್ಜುನ್ ಮೃತದೇಹದ ಶೋಧ ನಡೆಯಲಿದೆ. ಸಂಜೆಯಾಗಿದ್ದರಿಂದ ಕಾರ್ಯಚರಣೆ ನಿಲ್ಲಿಸಲಾಗಿದ್ದು ನಾಳೆ ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ಮತ್ತೆ  ಕಾರ್ಯಚರಣೆ ಮುಂದುವರಿಯಲಿದೆ.

ಇದನ್ನು ಓದಿ : ತಹಶೀಲ್ದಾರ್ ಕಚೇರಿಯಲ್ಲಿ ಹೊಯ್ ಕೈ

ತಿರುಪತಿ ಲಡ್ಡು ಪ್ರಸಾದ ತಿಂದಿದ್ದೀರಾ? ಹಾಗಾದ್ರೆ ಇಲ್ನೋಡಿ

ಕಾರವಾರದಲ್ಲಿ ಹಾಳಾದ ಹಾಲು ಮಾರಾಟ