ದಾಂಡೇಲಿ : ಎಮ್ಮೆಗಳನ್ನು ಮೇಯಿಸಲು ಕಾಡಿಗೆ ಹೋಗಿದ್ದ ವ್ಯಕ್ತಿಯ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ ಘಟನೆ ದಾಂಡೇಲಿ ತಾಲೂಕಿನ ನಾನಾಕೆಸರೋಡಾದ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ನಾನಾಕೆಸರೋಡಾದ ನಿವಾಸಿ ಮಹೇಶ ಜಾನು ಪಾಟೀಲ (56) ಎಂಬುವರೇ ಆನೆ ದಾಳಿಯಿಂದ ಗಾಯಗೊಂಡು ಬದುಕುಳಿದ ವ್ಯಕ್ತಿ. ತನ್ನ ಪತ್ನಿ ಸಮೇತರಾಗಿ ಇಂದು ಬೆಳಿಗ್ಗೆ ಎಮ್ಮೆಗಳನ್ನು ಮೇಯಿಸಲೆಂದು ಮನೆ ಹತ್ತಿರದಲ್ಲಿರುವ ಅರಣ್ಯ ಪ್ರದೇಶಕ್ಕೆ ಹೋಗಿದ್ದಾರೆ. ಈ ಸಮಯದಲ್ಲಿ ಕಾಡಾನೆಯೊಂದು ದಾಳಿ ಮಾಡಿದೆ. ಆನೆ ದಾಳಿಯಿಂದ ಕೈಗೆ ಬಲವಾದ ಗಾಯವಾಗಿದೆ. ಇನ್ನುಳಿದಂತೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಜೀವಪಾಯದಿಂದ ಪಾರಾಗಿದ್ದಾರೆ.
ಗಾಯಗೊಂಡ ಇವರನ್ನು ಸ್ಥಳೀಯರು ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಳಿಸಿದ್ದಾರೆ. ಸಾರ್ವಜನಿಕ ಆಸ್ಪತ್ರೆಗೆ ಬರ್ಚಿ ಅರಣ್ಯ ಇಲಾಖೆಯ ವಲಯಾರಣ್ಯಾಧಿಕಾರಿ ಆಶೋಕ್ ಶೆಳ್ಳೆನ್ನವರ, ಅರಣ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಆಲೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಲಕ್ಷ್ಮಣ ಜಾಧವ್ ಮತ್ತು . ದಾಂಡೇಲಿ ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದಾರೆ.
	
						
							
			
			
			
			
