ಜೋಯಿಡಾ : ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಕರಿಯಾದಿ ಗ್ರಾಮದಲ್ಲಿ ಹೆಬ್ಬಾವೊಂದು ಪ್ರತ್ಯಕ್ಷವಾಗಿದೆ.
ಗ್ರಾಮದ ತಿಮ್ಮಣ್ಣ ಗಾಂವ್ಕರ ಎನ್ನುವವರ ಮನೆ ಹತ್ತಿರ ಬುಧವಾರ ಬೆಳಿಗ್ಗೆ 6 ಅಡಿ ಉದ್ದದ ಹೆಬ್ಬಾವು ಕಾಣಿಕೊಂಡಿತ್ತು. ಹೆಬ್ಬಾವು ಕಂಡು ಮನೆಯವರು ಗಾಬರಿಯಾಗಿದ್ದರು. ತಕ್ಷಣ ಗುಂದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರಿಂದ ಕೂಡಲೇ ಕಾರ್ಯಪ್ರವೃತ್ತರಾದ ಗುಂದ ಅರಣ್ಯ ಇಲಾಖೆಯ ಸಿದ್ದೇಶ್ವರ ಸ್ಥಳಕ್ಕೆ ಧಾವಿಸಿ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿನಲ್ಲಿ ಬಿಟ್ಟಿದ್ದಾರೆ.
ಸೆರೆ ಹಿಡಿದ ಹೆಬ್ಬಾವು ಮರಿಯಾಗಿದ್ದು ಯಾವುದು ಪ್ರಾಣಿಯನ್ನು ತಿಂದು ಮುಂದೆ ಹೋಗಲಾರದೆ ಕಷ್ಟ ಅನುಭವಿಸುತಿತ್ತು. ಗುಂದ ವಲಯ ಅರಣ್ಯಾಧಿಕಾರಿ ರವಿ ಕಿರಣ ಸಂಪಗಾವಿ ಅವರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಕೆ ಸಿಬ್ಬಂದಿಗಳಾದ ಸಿದ್ದೇಶ್ವರ , ಶರತ ಐಹೊಳೆ, ಸುನೀಲ್, ಕೃಷ್ಣಾ ಎಡಗೆ , ಬಸವರಾಜ್ ಇತರರು ಉಪಸ್ಥಿತರಿದ್ದರು.