ಕಾರವಾರ: ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಶಾಲಾ ಕಾಲೇಜುಗಳು ಎಂದಿನಂತೆ ನಡೆಯಲಿದೆ.
ಇಂದು ಯಾವ ಶಾಲಾ ಕಾಲೇಜುಗಳಿಗೂ ರಜೆ ಇರುವುದಿಲ್ಲ. ರಜೆ ನೀಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿಯ ಮೂಲಗಳು ತಿಳಿಸಿವೆ. ಇಂದು ಆಗಸ್ಟ್ 5 ರಂದು ಎಂದಿನಂತೆ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳು ತೆರೆಯಲಿದ್ದು, ವಿದ್ಯಾರ್ಥಿಗಳು ಹುಷಾರಾಗಿ ಶಾಲಾ ಕಾಲೇಜುಗಳಿಗೆ ಹೋಗಿ ಬರಬೇಕಾಗಿದೆ.
ಜಿಲ್ಲಾಧಿಕಾರಿ ಆದೇಶ ಫೇಕ್ ಮಾಡಿದ ಕಿಡಿಗೇಡಿಗಳು.: ದಿನಾಂಕ 2 ರ ಜಿಲ್ಲಾಧಿಕಾರಿಗಳ ಆದೇಶ ಪ್ರತಿಯನ್ನ ಕಿಡಿಗೇಡಿಗಳು ತಿದ್ದಿ ಆಗಸ್ಟ್ 5 ರಂದು ರಜೆ ಎಂದು ವೈರಲ್ ಮಾಡಿದ್ದರು. ಇದು ಸಂಪೂರ್ಣ ಸುಳ್ಳಾಗಿದ್ದು ಶಾಲಾ ಕಾಲೇಜುಗಳಿಗೆ ಇಂದು ರಜೆ ಇರುವುದಿಲ್ಲ ಎಂದು ತಿಳಿಸಲಾಗಿದೆ.