ಉಡುಪಿ(UDUPI) : ವಿವಾಹದ ಸಂದರ್ಭದಲ್ಲಿ ವರ ಮಹಾಶಯನೊಬ್ಬ ಓಡಿ ಹೋದ ಘಟನೆ  ಬೈಂದೂರು ತಾಲೂಕಿನ ಅಳಿವೆಕೋಡಿ ಎಂಬಲ್ಲಿ ನಡೆದಿದೆ.

ಅಳಿವೆಕೋಡಿ ಯುವಕನ ಜೊತೆಗೆ ಉಪ್ಪುಂದದ ಯುವತಿಯೋರ್ವಳ ಮದುವೆ ನಿಶ್ಚಯವಾಗಿತ್ತು.  ನಾಗೂರಿನಲ್ಲಿ ಮದುವೆ ಸಮಾರಂಭಕ್ಕೆ ಏರ್ಪಟಾಗಿತ್ತು. ಹೀಗಾಗಿ ಮದುಮಗನ ಮನೆಯಲ್ಲಿ ಮೆಹಂದಿ ಕಾರ್ಯಕ್ಕಾಗಿ  ಸಿದ್ದತೆಯನ್ನು ನಡೆದಿತ್ತು. ಮನೆ ಮಂದಿಯೆಲ್ಲಾ ಮದುವೆಯ ಸಂಭ್ರಮದಲ್ಲಿದ್ದಾಗ ಮದುಮಗ ಸಾಮಾನುಗಳನ್ನು ತರಲು  ಹೋಗುವುದಾಗಿ ತಿಳಿಸಿ ಮನೆಯಿಂದ ತೆರಳಿದ್ದ. ಆದರೆ ರಾತ್ರಿಯಾದರೂ  ಮನೆಗೆ ವಾಪಾಸ್‌ ಬಂದಿಲ್ಲ. ಹೀಗಾಗಿ ತಲೆಬಿಸಿಯಾಗಿ ವರನ ಕಡೆಯವರು ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ.

ಮಾಹಿತಿಯ ಪ್ರಕಾರ ವರ ತನ್ನ ಮದುವೆಗೆ ಬೇಕಾದ ಆಭರಣ, ಬಟ್ಟೆ ಎಲ್ಲಾ ಖರೀದಿಸಿದ್ದ ಎನ್ನಲಾಗಿದೆ.  ಆದರೆ ಮನೆಯಿಂದ ಹೊರಗೆ ಹೋಗುವಾಗ ಕೈಗೆ ಕಟ್ಟಿದ್ದ ಬಂಗಾರದ  ಬ್ರಾಸ್ಲೈಟ್‌ ಮತ್ತು ಮೊಬೈಲ್  ಮನೆಯಲ್ಲಿಯೇ ಇಟ್ಟು ಹೋಗಿದ್ದಾನೆ. ಆದರೆ ಆತ ಎಲ್ಲಿ ಹೋಗಿದ್ದಾನೆಂಬುದು ಗೊತ್ತಾಗದೆ ಮದುವೆ ರದ್ದುಪಡಿಸಲಾಗಿದೆ.