ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಹುಬ್ಬಳ್ಳಿ (Hubballi):  ಸರ್ಕಾರಿ ಬಸ್ ನಲ್ಲಿ  ನಮಾಜ್ ಮಾಡಿದ ಚಾಲಕನ ವಿರುದ್ದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಅಮಾನತ್(Suspend) ಮಾಡಲಾಗಿದೆ.

ಕೆಎಸ್‌ಆರ್‌ಟಿಸಿ ಬಸ್(Ksrtc Bus) ಚಾಲಕ  ವಿ ಆರ್ ಮುಲ್ಲಾ ಎಂಬುವರು ಬಸ್ ಅನ್ನು ನಡು ರಸ್ತೆಯಲ್ಲೇ ನಿಲ್ಲಿಸಿ ನಮಾಜ್ ಮಾಡಿರುವ ಘಟನೆಗೆ  ಭಾರಿ ವಿರೋಧ ವ್ಯಕ್ತವಾಗಿತ್ತು. ಏಪ್ರಿಲ್ 29ರಂದು ಹುಬ್ಬಳ್ಳಿಯಿಂದ ಹಾವೇರಿಗೆ(Hubli to Haveri) ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಈ ಘಟನೆ ನಡೆದಿತ್ತು. ಬಸ್‌ನಲ್ಲಿ ಪ್ರಯಾಣಿಕರು ಇದ್ದರೂ ಕೂಡಾ ಚಾಲಕ ಕರ್ತವ್ಯದ ಅವಧಿಯಲ್ಲಿ ಬಸ್ ನಿಲ್ಲಿಸಿ ಸೀಟ್‌ನಲ್ಲಿ ಕುಳಿತುಕೊಂಡು ನಮಾಜ್ ಮಾಡಿದ್ದಾರೆಂಬ  ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.

ಈ ವಿಷಯ ಗಮನಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ(Ramalinga reddi) ಅವರು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ ಎಂ ಅವರಿಗೆ ಪತ್ರ ಬರೆದಿದ್ದಾರೆ. ಈ ಪ್ರಕರಣದ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ. ತನಿಖೆ ನಡೆಸಿ ತಪ್ಪು ಕಂಡುಬಂದರೆ ಚಾಲಕನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ ಮುಂದೆ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆ ಪತ್ರದಲ್ಲಿ ತಿಳಿಸಿದ್ದಾರೆ
ಇದನ್ನು ಓದಿ : ರಸ್ತೆಯ ಮೇಲೆ ಪಾಕ್ ಧ್ವಜ ಅಂಟಿಸಿ ಆಕ್ರೋಶ.

ದಾಂಡೇಲಿಯ ಕಾರ್ಖಾನೆಯಲ್ಲಿ ಬೃಹತ್ ಗಾತ್ರದ ಪ್ಯಾನೆಲ್ ಬಿದ್ದು ಗುತ್ತಿಗೆ ಕಾರ್ಮಿಕ ಸಾವು

ಯುದ್ಧದ ಆತಂಕ. ಪಾಕ್ ಪ್ರಧಾನಿ ಆಸ್ಪತ್ರೆಗೆ ದಾಖಲು. ರಹಸ್ಯ ಕಾಪಾಡಲು ಹರಸಾಹಸ.