ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ದಾಂಡೇಲಿ(Dandeli) : ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯಲ್ಲಿ (West Coast Paper Mill) ಕೆಲಸ ಮಾಡುತ್ತಿದ್ದ ವೇಳೆ ರೆಡಿಯೇಟರ್(Radiator) ಯಂತ್ರ ಬಿದ್ದು ಗುತ್ತಿಗೆ ಕಾರ್ಮಿಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ನಗರದ ಹಳೆ ದಾಂಡೇಲಿಯ(Old Dandeli) ಅಬ್ದುಲ್ ಸಲೀಂ ಖಲಾಸಿ(55) ಎಂಬವರೇ ಮೃತಪಟ್ಟ ಗುತ್ತಿಗೆ ಕಾರ್ಮಿಕ. ಈ ಬಗ್ಗೆ ಮೃತರ ಪತ್ನಿ ಬಲ್ಕಿಸ್ ಬಾನು ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಗುತ್ತಿಗೆದಾರ ಸಾಜಿದ್ ಪಠಾಣ್ ಮತ್ತು ಮೇಲ್ವಿಚಾರಕ ಅಬ್ದುಲ್ ಖಾದರ್ ಪಠಾಣ್ ಇಂದು ಬುಧವಾರ ಸಂಜೆ ನಾಲ್ಕು ಗಂಟೆಯಿಂದ ನಾಲ್ಕುವರೆ ಗಂಟೆಯ ನಡುವಿನ ಅವಧಿಯಲ್ಲಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ(West Coast Paper Mill) 6 ನಂಬರ್ ಪ್ಲ್ಯಾಂಟ್’ನ 14ನೇ ಮೀಟರ್ಸ್ ನಲ್ಲಿ ರೇಡಿಯೇಟರ್ ಯಂತ್ರವನ್ನು ಸ್ಥಳಾಂತರ ಮಾಡುವ ಸಮಯದಲ್ಲಿ ಯಾವುದೇ ಸುರಕ್ಷತೆಯ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷತನದಿಂದ ಕೆಲಸ ಮಾಡಿಸಿದರಿಂದ ರೇಡಿಯೇಟರ್ ಯಂತ್ರ ಬಿದ್ದು ಗಂಡ ಅಬ್ದುಲ್ ಸಲೀಂ ಖಲಾಸಿ ಅವರು ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಮೃತ ದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ತಂದಾಗ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದಾರೆ. ಆಸ್ಪತ್ರೆಗೆ ಕಾರ್ಖಾನೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ನಗರ ಠಾಣೆಯ ಪಿಎಸ್ಐ ಅಮೀನ್ ಅತ್ತಾರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಇದನ್ನು ಓದಿ : ಯುದ್ಧದ ಆತಂಕ. ಪಾಕ್ ಪ್ರಧಾನಿ ಆಸ್ಪತ್ರೆಗೆ ದಾಖಲು. ರಹಸ್ಯ ಕಾಪಾಡಲು ಹರಸಾಹಸ.
ಅನ್ಯ ಕೋಮಿನ ಬಾಣಂತಿಗೆ ತುರ್ತು ರಕ್ತದಾನ ಮಾಡಿದ ವಿಶೇಷ ಚೇತನ ವ್ಯಕ್ತಿ
.