ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಸಿದ್ದಾಪುರ (Siddapura) :  ತಾಲೂಕಿನ ನಿಲ್ಕುಂದ(Nilkunda) ಸಮೀಪದ  ವಾಟೆಹೊಳೆ ಜಲಪಾತದಲ್ಲಿ (Watehole Falls) ಇಬ್ಬರು ನೀರು ಪಾಲಾದ(Drowned) ಘಟನೆ ಶುಕ್ರವಾರ ಸಂಜೆ ನಡೆದಿದೆ.

ಶಿರಸಿ ಮೂಲದ(Sirsi Native) ಸುಹಾಸ ಶೆಟ್ಟಿ ಮತ್ತು ಅಕ್ಷಯ ಭಟ್  ನೀರು ಪಾಲಾದ ಯುವಕರೆಂದು ತಿಳಿದುಬಂದಿದೆ. ಒಟ್ಟು ಆರು ಜನ ಸ್ನೇಹಿತರು ಗುಂಪುಗೂಡಿ  ಸಿದ್ದಾಪುರ ತಾಲೂಕಿನ ನಿಲ್ಕುಂದಾದ ವಾಟೆಹೊಳೆ ಜಲಪಾತಕ್ಕೆ ತೆರಳಿದ್ದರು. ಶುಕ್ರವಾರ(Friday) ಸಂಜೆ ಆರುವರೆ ಸುಮಾರಿಗೆ  ಕಾಲು ಜಾರಿ ಇಬ್ಬರು ನೀರಿನಲ್ಲಿ ಮುಳುಗಿದ್ದಾರೆಂದು ಶಂಕಿಸಲಾಗಿದೆ. ಜೊತೆಗಿದ್ದವರು ಊರಿಗೆ ಬಂದು ವಿಷಯ ತಿಳಿಸಿದಾಗ ಘಟನೆ ನಡೆದಿರೋದು ಗೊತ್ತಾಗಿದೆ.  

ಶಿರಸಿ ಡಿವೈಎಸ್‌ಪಿ ಕೆ. ಎಲ್. ಗಣೇಶ,  ಸಿದ್ದಾಪುರ ಇನಸ್ಪೆಕ್ಟರ್ ಜೆ.ಬಿ. ಸೀತಾರಾಮ, ಪಿಎಸ್‌ಐ ಅನಿಲ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನು ಓದಿ : ಕಾರವಾರದಲ್ಲಿ ಲೋಕಾಯುಕ್ತ ದಾಳಿ.ನಗರ ಯೋಜಕ ಸದಸ್ಯ ಬಲೆಗೆ

ತೆರವುಗೊಳಿಸುವ ವೇಳೆ ಎದ್ದು ನಿಂತ ಕಾಳಿ ಸೇತುವೆಯ ಸ್ಲ್ಯಾಬ್