ದಾಂಡೇಲಿ : ಅಕ್ರಮ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಇಬ್ಬರನ್ನು ಬಂಧಿಸಿದ ಘಟನೆ ನಗರದ ದಂಡಕಾರಣ್ಯ ಇಕೋ ಪಾರ್ಕ ಹತ್ತಿರ ನಡೆದಿದೆ.
ಸುಭಾಷ್ ನಗರದ ಶಾನವಾಜ ಆಯಾನ್ ಇಮ್ತಿಯಾಜ ಖಾನ್ ಮತ್ತು ಫರಾನ್ ಖಾಸಿಂಸಾಬ್ ಛಬ್ಬಿ ಬಂಧಿತರಾಗಿದ್ದಾರೆ.
ಖಚಿತ ಮಾಹಿತಿಯಡಿ ಡಿವೈಎಸ್ಪಿ ಶಿವಾನಂದ ಮದರಖಂಡಿ ಹಾಗೂ ಸಿಪಿಐ ಭೀಮಣ್ಣ.ಎಂ.ಸೂರಿ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆಯ ಪಿಎಸ್ಐ ಗಳಾದ ಐ. ಆರ್. ಗಡ್ಡೇಕರ್ ಹಾಗೂ ಯಲ್ಲಪ್ಪ. ಎಸ್ ಮತ್ತು ಸಿಬ್ಬಂದಿಗಳು ದಾಳಿ ನಡೆಸಿದ್ದರು. ದಾಳಿ ಸಂದರ್ಭದಲ್ಲಿ 3 ಕೆಜಿ 598 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ದಾಂಡೇಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿತರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಇದನ್ನು ಓದಿ : ಇನ್ಸೂರೆನ್ಸ್ ಆಸೆಗೆ ಭಿಕ್ಷುಕನ ಕೊಲೆ