ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Bangalore) : ಉತ್ತರಕನ್ನಡ (Uttarakannada) ಜಿಲ್ಲೆಯ ಅಂಕೋಲಾ ತಾಲೂಕಿನ(Ankola Taluku) ಬೇಲೆಕೇರಿ ಬಂದರಿನಲ್ಲಿ (Belekeri Port) ನಡೆದಿದ್ದ  ಅಕ್ರಮ ಕಬ್ಬಿಣದ ಅದಿರು ರಫ್ತು(Iron ore Export) ಪ್ರಕರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯನ್ನು ಜಾರಿ ನಿರ್ದೇಶನಾಲಯ ತೀವ್ರಗೊಳಿಸಿದೆ. ಕರ್ನಾಟಕ(Karnataka) ಮತ್ತು ಹರಿಯಾಣದ(Haryan) ಪ್ರಮುಖ ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ಏಕಕಾಲದಲ್ಲಿ  ದಾಳಿ(Raid) ಮಾಡಿದ್ದಾರೆ.

ಕೇಂದ್ರ ತನಿಖಾ ದಳವು ಸಲ್ಲಿಸಿದ ಹಲವು ಎಫ್‌ಐಆರ್‌ಗಳು ಮತ್ತು ಚಾರ್ಜ್‌ಶೀಟ್‌ಗಳ ಆಧಾರದ ಮೇಲೆ ಪ್ರಿವೆನ್ಸನ್ ಆಫ್ ಮನಿ ಲಾಂಡರಿಂಗ್ ಆಕ್ಟ್ ನಿಬಂಧನೆಗಳ ಅಡಿಯಲ್ಲಿ ಈ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ಸಿಬಿಐ ಈ ಪ್ರಕರಣಗಳ ತನಿಖೆ ಕೈಗೊಂಡಿತ್ತು.

ರಾಜಧಾನಿ ಬೆಂಗಳೂರು(Bangalore) ಮತ್ತು ವಿಜಯನಗರ(Vijayanagar) ಜಿಲ್ಲೆಯ ಹೊಸಪೇಟೆ(Hospete) ಸೇರಿದಂತೆ ಕರ್ನಾಟಕದಲ್ಲಿ ಹಾಗೂ ಹರಿಯಾಣದ ಗುರುಗ್ರಾಮ್‌ನಲ್ಲಿ ಒಟ್ಟು ಕನಿಷ್ಠ 20 ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಎಂಎಸ್ಪಿಎಲ್
ಲಿಮಿಟೆಡ್ (MSPL ltd),  ಗ್ರೀನ್‌ಟೆಕ್ಸ್‌ ಮೈನಿಂಗ್ ಇಂಡಸ್ಟ್ರೀಸ್ ಲಿಮಿಟೆಡ್, ಶ್ರೀನಿವಾಸ ಮಿನರಲ್ಸ್ ಟ್ರೇಡಿಂಗ್ ಕಂ., ಅರ್ಷದ್ ಎಕ್ಸ್‌ಪೋರ್ಟ್ಸ್, ಎಸ್ವಿಎಂ (SVM) ನೆಟ್ ಪ್ರಾಜೆಕ್ಟ್ ಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್ ಮತ್ತು ಆಲೈನ್ ಮಿನ್‌ಮೆಟಲ್ಸ್ ಇಂಡಿಯಾ ಪ್ರೈ. ಲಿಮಿಟೆಡ್ ಸೇರಿದಂತೆ ಹಲವು ಗಣಿ ಮತ್ತು ರಫ್ತು ಕಂಪನಿಗಳು ಹಾಗೂ ಅವುಗಳ ಪ್ರಮುಖ ನಿರ್ವಹಣಾ ವ್ಯಕ್ತಿಗಳ ಆವರಣದಲ್ಲಿ  ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಸಂಬಂಧಪಟ್ಟ  ಕಂಪನಿಗಳು ಮತ್ತು ವ್ಯಕ್ತಿಗಳು ಅಕ್ರಮವಾಗಿ ಅದಿರನ್ನು ಗಣಿಗಾರಿಕೆ(Mining) ಮಾಡಿ  ಸರ್ಕಾರಕ್ಕೆ ಪಾವತಿಸಬೇಕಾದ  ತೆರಿಗೆಗಳು(Taxes) ಮತ್ತು ರಾಯಧನವನ್ನು(Royalty) ವಂಚಿಸಿದ್ದಾರೆ. ಹೀಗಾಗಿ  ರಾಜ್ಯದ ಖಜಾನೆಗೆ ಭಾರಿ ನಷ್ಟ ಉಂಟಾಗಿದ್ದಲ್ಲದೇ , ಪರಿಸರಕ್ಕೆ ಅಪಾರ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಲಾಗಿದೆ.

ಬೆಲೇಕೇರಿ  ಬಂದರಿಗೆ(Belekeri Port) ಸಂಬಂಧಿಸಿದ ಇನ್ನೊಂದು ಪ್ರಕರಣದಲ್ಲಿ ಬಳ್ಳಾರಿಯಿಂದ ಬೇಲೆಕೇರಿಗೆ(Ballari to Belekeri) ಅಕ್ರಮವಾಗಿ ಅದಿರು ಸಾಗಿಸಿದ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಇಡಿ ಅಧಿಕಾರಿಗಳು  ಕಳೆದ ಸೆಪ್ಟೆಂಬರ್‌ನಲ್ಲಿ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್  ಸೈಲ್(Satish Sail) ಅವರನ್ನು ಬಂಧಿಸಲಾಗಿತ್ತು.

ಇದನ್ನು ಓದಿ : ಭಟ್ಕಳದಲ್ಲಿ ಭೀಕರ ಅಪಘಾತ. ಸ್ಕೂಟರ್ ಸವಾರನ ದುರ್ಮರಣ.

ಸಮುದ್ರದಲ್ಲಿ ಜೀವ ತೆಗೆಯವ ಮೀನುಗಳಿವೆ ಹುಷಾರ್.

ಕೆ.ಡಿ.ಸಿ.ಸಿ. ಬ್ಯಾಂಕ್ ಚುನಾವಣೆ: ಅಪಪ್ರಚಾರ ನನ್ನ ಸ್ಫರ್ಧೆಯನ್ನು ಹತ್ತಿಕ್ಕುವ ಪ್ರಯತ್ನ: ಸರಸ್ವತಿ ಎನ್. ರವಿ

ಮೀನು ಹಿಡಿಯುವ ವೇಳೆ ಹಾರಿದ ಮೀನು. ಮೀನುಗಾರ ಯುವಕನ ದುರಂತ ಸಾವು.