ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಹಳಿಯಾಳ (Haliyal) : ಭಾಗವತಿ ಸಮೀಪದ ಹಳಿಯಾಳ–ಯಲ್ಲಾಪುರ ರಸ್ತೆಯಲ್ಲಿ (Haliyal-Yallapur Road) ಇಂದು ಬೆಳಿಗ್ಗೆ ಒಂಟಿ ಸಲಗ ಕಾಣಿಸಿಕೊಂಡು, ವಾಹನ ಸವಾರರಲ್ಲಿ ಆತಂಕ ಮೂಡಿಸಿದ ಘಟನೆ ನಡೆದಿದೆ.

ಹಳಿಯಾಳ ತಾಲ್ಲೂಕಿನ ಈ ಭಾಗದಲ್ಲಿ ನಡು ರಸ್ತೆಯಲ್ಲೇ ಕಾಣಿಸಿಕೊಂಡ ಆನೆ(Elephant)  ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು  ಭಯಗೊಳ್ಳುವಂತೆ ಮಾಡಿತು.

ಆನೆ ಕೆಲಕಾಲ ರಸ್ತೆ ಮಧ್ಯದಲ್ಲೇ ನಿಂತಿದ್ದರಿಂದ ಸಂಚಾರಕ್ಕೆ ತಾತ್ಕಾಲಿಕ ಅಡಚಣೆ ಉಂಟಾಯಿತು. ಈ ವೇಳೆ ಅಲ್ಲಿಂದ ತೆರಳುತ್ತಿದ್ದ ವಾಹನ ಸವಾರರು ತಮ್ಮ ಮೊಬೈಲ್‌ಗಳಲ್ಲಿ ಆನೆಯ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕೆಂದು ಸೂಚನೆ ನೀಡಿದ್ದಾರೆ. ವಿಶೇಷವಾಗಿ ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಕಾಡುಪ್ರಾಣಿಗಳು ರಸ್ತೆ ಮೇಲೆ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಜಾಗ್ರತೆ ಅಗತ್ಯವಾಗಿದೆ.

ಈ ಭಾಗದಲ್ಲಿ ಆನೆಗಳ ಸಂಚಾರ  ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ  ಸಾರ್ವಜನಿಕರು ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.

ಇದನ್ನು ಓದಿ : ಮನೆ ಕಳವು ಪ್ರಕರಣ ಭೇದಿಸಿದ ಪೊಲೀಸರು. 24 ಗಂಟೆಯೊಳಗೆ ಆರೋಪಿ ಬಂಧನ

ಮಾಜಾಳಿಯ ರಾಮನಾಥ ಕಡಲತೀರದಲ್ಲಿ ಸಮುದ್ರ ಸ್ನಾನ ವೇಳೆ ಬಾಲಕ ಸಾವು.