ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) :   ರಾಷ್ಟ್ರೀಯ ಹೆದ್ದಾರಿ  ಮಾಜಾಳಿ  ತನಿಖಾ ಠಾಣೆಯಲ್ಲಿ(Majali Check Post) ಅಬಕಾರಿ ಅಕ್ರಮಗಳ ಪತ್ತೆಗಾಗಿ ವಾಹನಗಳ ತಪಾಸಣೆ ನಡೆಸುತ್ತಿರುವಾಗ ಮಹಿಳೆಯೋರ್ವಳು  ಚೀಲದಲ್ಲಿ ಮದ್ಯ ಸಾಗಿಸುತ್ತಿದ್ದ ಘಟನೆ ಗೊತ್ತಾಗಿದೆ.

ಮಹಿಳೆ ಎರಡು ಚೀಲಗಳನ್ನು ಹೊತ್ತುಕೊಂಡು ಗೋವಾದಿಂದ ಕಾರವಾರದ(Goa to Karwar) ಕಡೆಗೆ ಬರುವುದನ್ನ ಗಮನಿಸಿದ ಅಬಕಾರಿ ಸಿಬ್ಬಂದಿಗಳು(Exice Staff)  ಅವಳನ್ನು ತಡೆದು ತಪಾಸಣೆ ನಡೆಸಿದಾಗ ಎರಡು ಪ್ರತ್ಯೇಕ ಚೀಲಗಳಲ್ಲಿ 750 ಮಿಲಿಯ 37 ಗೋವಾ ರಾಜ್ಯದ(Goa State) ಮದ್ಯದ ಬಾಟಲಿಗಳು (ಒಟ್ಟು: 27.5ಲೀ) ಪತ್ತೆಯಾಗಿದೆ. ಸಂಬಂಧ ಪ್ರಕರಣ ದಾಖಲಾಗಿದೆ                                                                                                                                                                       
  ಮಾರ್ಚ್ ಐದರಂದು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ‌  ಅಕ್ರಮಗಳ ಪತ್ತೆಗಾಗಿ ವಾಹನಗಳ ತಪಾಸಣೆ ನಡೆಸುತ್ತಿರುವಾಗ  ದ್ವಿಚಕ್ರ ವಾಹನವೊಂದು  ಗೋವಾದಿಂದ ಕಾರವಾರದ(Goa to Karwar) ಕಡೆಗೆ ಬರುತ್ತಿದ್ದಾಗ  ತಪಾಸಣೆ ನಡೆಸಲಾಗಿತ್ತು. ಆ ಸಂದರ್ಭದಲ್ಲಿ  ಬಿಳಿಯ ಬಣ್ಣದ ಚೀಲದಲ್ಲಿ 750 ಮಿಲಿಯ 36 ಗೋವಾ ರಾಜ್ಯದ ಮದ್ಯದ ಬಾಟಲಿಗಳು (ಒಟ್ಟು: 27ಲೀ) ಪತ್ತೆಯಾಗಿವೆ.

ತಕ್ಷಣ  ಆರೋಪಿತ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆಂದು ಅಬಕಾರಿ ಮಾಹಿತಿ ತಿಳಿಸಿದೆ. ಮದ್ಯ ಹಾಗೂ ಒಂದು ದ್ವಿಚಕ್ರ ವಾಹನವನ್ನು ಜಪ್ತುಪಡಿಸಿಕೊಂಡು(Vehicle Seaz) ಅಬಕಾರಿ ಉಪ ಅಧೀಕ್ಷಕರು   ಮುಂದಿನ ಕ್ರಮ ಕೈಗೊಂಡಿದ್ದಾರೆ.
                                                                                                             ಕಾರವಾರ ತಾಲೂಕಿನ ಮುಡಗೇರಿ ಅರಣ್ಯದಲ್ಲಿ(Karwar Taluku Mudageri Forest) ಗಸ್ತು ತಿರುಗುತ್ತಿದ್ದ ಸಮಯದಲ್ಲಿಯೇ ಬಿಳಿಯ ಬಣ್ಣದ ದ್ವಿಚಕ್ರ ವಾಹನವು ಮುಡಗೇರೆ ಅರಣ್ಯ ಪ್ರದೇಶದಿಂದ  ಗ್ರಾಮದ ಕಡೆಗೆ ಹೋಗುತ್ತಿರುವುದು ಕಂಡುಬಂದಿತು. ಕೂಡಲೇ ಸದರಿ  ದ್ವಿಚಕ್ರ ವಾಹನವನ್ನು ಬೆನ್ನಟ್ಟಿದ್ದಾಗ  ಸವಾರ ವಾಹನ ನಿಲ್ಲಿಸದೆ ಅತಿ ವೇಗವಾಗಿ ಹೊರಟಿದ್ದ. ಮುಂದೆ ಸಾಕಷ್ಟು ತಿರುವುಗಳು ಇರುವ ಕಾರಣ ದ್ವಿಚಕ್ರ ವಾಹನ  ಸವಾರನು ನಿಯಂತ್ರಣ ತಪ್ಪಿ ಸದರಿ ದಿಚಕ್ರ ವಾಹನದೊಂದಿಗೆ ರಸ್ತೆಯ ಬದಿಯಲ್ಲಿಯೇ ಬಿದ್ದು ವಾಹನ ಬಿಟ್ಟು ಓಡಿ ಹೋಗಿದ್ದಾನೆ.

ವಾಹನದ  ಚೀಲದಲ್ಲಿ 750 ಮಿಲಿಯ 36 ಗೋವಾ ಸ್ಪೆಷಲ್ ಫಾಮ್ ಫೆನ್ನಿ  ಮತ್ತು 500 ಮಿಲಿಯ 12 ಕಿಂಗ್ ಫಿಶರ್ ಸ್ಟ್ರಾಂಗ ಬಿಯರ್ ಟಿನ್ ಗಳು ಪತ್ತೆಯಾಗಿದೆ. ಅಂದಾಜು 79,800 ರೂ ಮೌಲ್ಯದ ಗೋವಾ ಫೆನ್ನಿ , ಗೋವಾ ಬಿಯರ ಹಾಗೂ  ದ್ವಿಚಕ್ರ ವಾಹನವನ್ನು ಜಪ್ತುಪಡಿಸಿಕೊಳ್ಳಲಾಗಿದ್ದು‌ ಆರೋಪಿ‌ ಬಂಧನಕ್ಕಾಗಿ  ಮುಂದಿನ ತನಿಖೆ ನಡೆಸಲಾಗಿದೆ.

ಇದನ್ನು ಓದಿ : ನಾಳೆಯಿಂದ ವೈದ್ಯರ ಅನಿರ್ದಿಷ್ಠಾವಧಿ ಮುಷ್ಕರ. ಆರೋಗ್ಯ ಸೇವೆ ವ್ಯತ್ಯಯ ಸಾಧ್ಯತೆ.