ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Banglore) : ಸಾಲುಮರದ ತಿಮ್ಮಕ್ಕ(Salu Marada Timmakka) ನಿಧನ ಹಿನ್ನೆಲೆಯಲ್ಲಿ ಕರ್ನಾಟಕದ ಎಲ್ಲಾ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ-ಕಾಲೇಜುಗಳಿಗೆ(School College) ರಜೆ ನೀಡಲಾಗಿದೆ ಎಂಬ ಆದೇಶ  ನಕಲಿ ಆದೇಶ(Fake Order) ಎಂದು ಅರಣ್ಯ ಮತ್ತು ಜೀವಶಾಸ್ತ್ರ ಪರಿಸರ ಸಚಿವ ಈಶ್ವರ ಖಂಡ್ರೆ(Ishwar Khandre) ತಿಳಿಸಿದ್ದಾರೆ.

ನ.15ರಂದು ಬೆಳಗ್ಗೆ 7.30ರಿಂದ 10.30ರವರೆಗೆ ಸಾಲುಮರದ ತಿಮ್ಮಕ್ಕ ಅವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ(Ravindra Kalakshetra) ಸಾರ್ವಜನಿಕ ದರ್ಶನ ಇಡಲಾಗುತ್ತದೆ ಎಂದು ತಿಳಿಸಿದ ಖಂಡ್ರೆ ಕಲಾಗ್ರಾಮದಲ್ಲಿ  ಅಂತ್ಯಕ್ರಿಯೆ ನಡೆಸಲು ಸಿಎಂ  ಸಿದ್ದರಾಮಯ್ಯ(CM Siddaramaiha) ಅವರು ಸೂಚಿಸಿದ್ದಾರೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ(Social Media) ಶಾಲೆ, ಕಾಲೇಜುಗಳಿಗೆ ರಜೆ ಎನ್ನುವ ಆದೇಶದ ಪ್ರತಿ ಹರಿದಾಡುತ್ತಿದೆ. ಆದರೆ ಈ ಆದೇಶ ನಕಲಿ ಎಂದು ಸಚಿವ ಈಶ್ವರ ಖಂಡ್ರೆ ಸ್ಪಷ್ಟನೆ ನೀಡಿದ್ದಾರೆ.

ನಾಳೆ ಯಾವುದೇ ಸರಕಾರಿ ರಜೆ(Government Holiday) ಇರುವುದಿಲ್ಲ. ಕೇವಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಸ್‌ಎಂ ಕೃಷ್ಣ(S M Krishna) ಅವರು ಮರಣ ಹೊಂದಿದ ಆದೇಶವನ್ನು ತಿರುಚಿ ವೈರಲ್ ಮಾಡಲಾಗಿದೆ.

ಆದೇಶದ ಪ್ರತಿಯಲ್ಲಿ ಸಹಿ ಮಾಡಿದ ಅಧಿಕಾರಿ ಪ್ರಸ್ತುತ ಆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ಇಂತಹ ನಕಲಿ ಆದೇಶವನ್ನು ಯಾರೂ ಕೂಡ ವೈರಲ್ ಮಾಡದಂತೆ ಈಶ್ವರ್ ಖಂಡ್ರೆ(Ishwar Khandre) ತಿಳಿಸಿದ್ದಾರೆ.

ಇದನ್ನು ಓದಿ : ಆಕ್ಷಿಜನ್ ಕೊಟ್ಟು ಮರೆಯಾದ ಅಜ್ಜಿ. ಸಾಲು ಮರದ ತಿಮ್ಮಕ್ಕ ಇನ್ನೂ ನೆನಪು ಮಾತ್ರ.

ರಾತ್ರಿ  ಉಪನಿರ್ದೇಶಕಿ ವಾಹನ ಹಿಂಬಾಲಿಸಿದ ಮರಳು ಸಾಗಾಟದಾರರು. ಹೊನ್ನಾವರದಲ್ಲಿ ನಡೆದ ಘಟನೆ.

ಕಾರವಾರದಲ್ಲಿ ಭೀಕರ ಅಪಘಾತ. ಓರ್ವನ ದುರ್ಮರಣ. ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳು ಗಂಭೀರ.