ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ನಗರದ ನಂದನಗದ್ದಾ(Nandanagadda) ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮನೆಯೊಂದು ಸಂಪೂರ್ಣವಾಗಿ ಭಸ್ಮವಾಗಿದೆ.

ಶಾಂತಾರಾಮ ದತ್ತ ದೇಸಾಯಿ ಎಂಬುವವರ ಮನೆ ಅಗ್ನಿ ಅನಾಹುತದಿಂದ ಹಾನಿಗೊಳಗಾಗಿವೆ . ಸಂಜೆ ಮನೆಯವರು ದೇವರಿಗೆ ದೀಪ ಹಚ್ಚಿ ಸಂಬಂಧಿಕರ ಮನೆಗೆ ಹೋಗಿದ್ದರು. ಈ ವೇಳೆ ದೀಪದ ಬೆಂಕಿ ಮನೆಯೊಳಗೆ ವ್ಯಾಪಿಸಿ ಸಂಪೂರ್ಣ ಹೊತ್ತಿ ಉರಿದಿದೆ. ಪರಿಣಾಮವಾಗಿ ಪೀಠೋಪಕರಣಗಳು, ಬಟ್ಟೆಗಳು ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳು ಎಲ್ಲವೂ ಸುಟ್ಟು ಭಸ್ಮವಾಗಿದೆ.

ಅಪಘಾತದ ಸಮಯದಲ್ಲಿ ಮನೆಯೊಳಗೆ ಯಾರೂ ಇಲ್ಲದಿದ್ದ ಕಾರಣ ಪ್ರಾಣಾಪಾಯ ತಪ್ಪಿದೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿಗಳಷ್ಟು ಹಾನಿ ಅಂದಾಜಿಸಲಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತುರ್ತಾಗಿ ನೌಕಾನೆಲೆ ಅಗ್ನಿಶಾಮಕ ದಳಕ್ಕೆ ಸಹಾಯ ಕೇಳಿದಾಗ ಕಾರ್ಯಚರಣೆಗೆ ಧಾವಿಸಿದ ಐಎನ್ಎಸ್ ಕದಂಬ ನೌಕಾನೆಲೆಯ ಸಿಬ್ಬಂದಿ ವರ್ಗದವರು ರಾಕೇಶ್ ದತ್ ಬಲುನಿ ಬೇಸ್ ಫೈರ್ ಆಫೀಸರ್ ಇವರ ಮಾರ್ಗದರ್ಶನದಲ್ಲಿ ಸುಭಾಷ್ ಎಂ ನಾಯ್ಕ ಸ್ಟೇಶನ್ ಆಫೀಸರ್, ನಾಗರಾಜ್ ಚಿಂಚಣಕರ್, ಸಂತೋಷ್ ಚಕಲಬಿ, ವೆಂಕಟೇಶ್ ಹರಿಕಂತ್ರ , ಗಣೇಶ್ ಮೊದಲಿಯಾರ್, ವಿನಾಯಕ್ ಕುಡ್ತಲ್ಕರ್ ಹಾಗೂ ಸೂರಜ್ ಕುರುಡೇಕರ್ ಇದ್ದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ.

ಅರಬ್ಬಿ ಸಮುದ್ರದಲ್ಲಿ ಮೀನುಗಾರರಿಗೆ ಮುಂದುವರಿದ ಶೋಧ. ಈಶ್ವರ ಮಲ್ಪೆ ತಂಡದಿಂದ ಹುಡುಕಾಟ.

ಆಟೋ, ಬೈಕ್, ಸೈಕಲ್ ಮೇಲೆ ಬಂದು ಜೂಗಾರಾಟ. 11ಜನರ ಮೇಲೆ ಪ್ರಕರಣ.

ಯಾಂತ್ರಿಕ ದೋಣಿಯಲ್ಲಿ ಸಿಲಿಂಡರ್ ಸೋರಿಕೆ. ಬೆಂಕಿಯಾಗಿ ಆತಂಕ. ತಪ್ಪಿದ ಅನಾಹುತ.