ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) : ತಾಲೂಕಿನ ಹಾರವಾಡ ಗಾಬೀತವಾಡ(Harwad gabitwad) ಕಡಲ ತೀರದಲ್ಲಿ ಶನಿವಾರ ಬೆಳಗಿನ ವೇಳೆ ರಾಶಿರಾಶಿ ಮೀನುಗಳು(Fishes) ದಡದತ್ತ ಬಂದ ಘಟನೆ ನಡೆದಿದೆ.
ಮೀನಿನ ರಾಶಿ–ರಾಶಿ ಕಂಡ ಸ್ಥಳೀಯರು ಮೀನು ಸಂಗ್ರಹಿಸಲು ಮುಗಿಬಿದ್ದಿರುವ ದೃಶ್ಯ ಕಂಡುಬಂದಿದೆ. ಸಮುದ್ರದ ತಂಪು ಹವಮಾನಕ್ಕೆ ಅಥವಾ ಅಲೆಗಳ ಅಬ್ಬರಕ್ಕೆ ಮೀನುಗಳು ತೇಲಿ ಬಂದಿರಬಹುದೆಂದು ಹೇಳಲಾಗುತ್ತಿದೆ.
ಬೆಳಿಗ್ಗೆ ಮೀನು ಬಂದಿರುವ ಸುದ್ದಿದ ನ ನಾಗರಿಕರು ಬಲೆ, ಬುಟ್ಟಿ, ಬಟ್ಟೆ ಹಿಡಿದು ಓಡಿ ಬಂದರು.ಕೆಲವರು ಜೀವಂತ ಮೀನು ಹಿಡಿದು ಖುಷಿ ಪಟ್ಟರು. ಕೆಲವೇ ಹೊತ್ತಿನೊಳಗೆ ತೀರಕ್ಕೆ ಬಂದ ಮೀನುಗಳು ಖಾಲಿಯಾದವು. ಸಂಗ್ರಹಿಸಿದ ಮೀನುಗಳನ್ನ ಮನೆಯ ಸಾರಿಗೆ, ಮಾರಾಟಕ್ಕಾಗಿಯೂ ಮೀನು ಜನ ಕೊಂಡೊಯ್ದರು.
ಕರಾವಳಿಯ ಕಡಲ ತೀರಗಳಲ್ಲಿ ಸಾಮಾನ್ಯವಾಗಿ ಇದೇ ತರಹ ಮೀನುಗಳು ಅಲ್ಲಲ್ಲಿ ಬರುತ್ತವೆ. ಇವತ್ತು ಹಾರವಾಡದ ಗಾಬೀತವಾಡದ ನಾಗರಿಕರಿಗೆ ಪ್ರಕೃತಿ ಉಡುಗೊರೆ(Nature Gift) ಕೊಟ್ಟಂತೆ ಖುಷಿಪಟ್ಟರು.
ಇದನ್ನು ಓದಿ : ಹೆದ್ದಾರಿಯಲ್ಲಿ ಏಡಿ ಬಿಟ್ಟು ಪ್ರತಿಭಟನೆ