ಕಾರವಾರ(KARWAR) : ಶಿರೂರು ಗುಡ್ಡಕುಸಿತದಲ್ಲಿ(SHIRURU LANDSLIDE) ನಾಪತ್ತೆಯಾಗಿರುವ ಮೂವರ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಶೋಧ ಕಾರ್ಯಚರಣೆ ಆರಂಭಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಅಧ್ಯಕ್ಷ ಶ್ರೀ ಪ್ರಣಾವಾನಂದ ಸ್ವಾಮಿ(PRANAVANANDA SWAMI) ನೇತೃತ್ವದಲ್ಲಿ ಬುಧವಾರ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿತ್ತು. ಆದರೆ ಪೊಲೀಸರು ಅನುಮತಿ ನೀಡಲಿಲ್ಲ. ಹೀಗಾಗಿ ಡಿಸಿ ಕಚೇರಿ ಎದುರು ಕೆಲ ಕಾಲ ಪ್ರತಿಭಟನೆ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಪ್ರಣಾವಾನಂದ ಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು. ಘಟನೆಯಲ್ಲಿ ಕಾಣೆಯಾದವರನ್ನು ಕೂಡಲೇ ಆಧುನಿಕ ಯಂತ್ರದ ಸಹಾಯದಿಂದ ಮೃತ ದೇಹ ಹುಡುಕುವುದಕ್ಕೆ ಪ್ರಾಮಾಣಿಕ ಪ್ರಯತ್ನಕ್ಕೆ ಮಾಡಬೇಕು. ಕಾಣೆಯಾದವರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ನೀಡಬೇಕು.
ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ (NHAI) ಹಾಗೂ ಅವ್ಯಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿರುವ ಐ ಆರ್ ಬಿ(IRB) ಕಂಪನಿ ವತಿಯಿಂದ ಪ್ರತಿ ಕುಟುಂಬದ ಸದಸ್ಯರ ಒಬ್ಬರಿಗೆ ಸದರಿ ಕಂಪನಿಗಳಲ್ಲಿ ನೌಕರಿ ಒದಗಿಸಬೇಕು.
ಉಳುವರೆ ಗ್ರಾಮದಲ್ಲಿ ಇರುವ ಸುಮಾರು 30 ಮನೆಗಳು ಸಂಪೂರ್ಣವಾಗಿ ನಾಶವಾಗಿದ್ದು, ಎಲ್ಲರಿಗೂ ಮನೆಗಳನ್ನು ಕಟ್ಟಿಸಿ ಆರ್ಥಿಕ ನೆರವನ್ನು ನೀಡಬೇಕು. ಮರಣಕ್ಕೆ ಕಾರಣವಾದ NHAI ಮತ್ತು IRB ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಅಧ್ಯಕ್ಷ ಸಂತೋಷ್ ಕುಮಾರ್ ಯಾದವ್ ಕರ್ನಾಟಕದ ರಿಜಿನಲ್ ಆಫೀಸರ್ ವಿ. ಬ್ರಾಹ್ಮಣ್‌ಕರ್, ಪ್ರೊಜೆಕ್ಟರ್ ಡೈರೆಕ್ಟರ್ ಹೊನ್ನಾವರ NHAI ಕಚೇರಿಯ ಹರಿಕೃಷ್ಣ ಮತ್ತು IRB ಕಂಪನಿಯ ನಿರ್ದೇಶಕರ ಮೇಲೆ ಇಲ್ಲವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಅಂಕೋಲಾ ಪೊಲೀಸ್ ಸ್ಟೇಷನ್ ನಲ್ಲಿ ಕೊಲೆ ಕೇಸ್ ದಾಖಲುಮಾಡಿ ತನಿಖೆ ಮಾಡಿ ಎಂದು ಅಂಕೋಲಾ ಮಾನ್ಯ ನ್ಯಾಯಾಲಯ ಹೇಳಿದ್ದರೂ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಮೃತರ ಕುಟುಂಬಕ್ಕೆ ತಲಾ 25 ಲಕ್ಷ ನೀಡುವಂತೆ ಪ್ರತಿಭಟನಾಕರಾರು ಒತ್ತಾಯಿಸಿದರು. ಕುಂದಾಪುರದಿಂದ ಗೋವಾವರೆಗೆ(KUNDAPURA to GOA) ರಸ್ತೆ ಮಾರ್ಗದಲ್ಲಿ ಇನ್ನು ಸಾಕಷ್ಟು ಕಡೆ ಗುಡ್ಡ ಕುಸಿದು ಬೀಳುವ ಸಾಧ್ಯತೆ ಇದ್ದು ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಹಾಲಕ್ಕಿ ಸಂಘದ ಜಿಲ್ಲಾಧ್ಯಕ್ಷ ಹನುಮಂತ ಗೌಡ, ಕೇರಳದ ಅರ್ಜುನ್ ಸಂಬಂಧಿ ರಾಜನ್ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬದವರು ಸೇರಿದಂತೆ ಇತರರು ಭಾಗವಹಿಸಿದ್ದರು.
ಇದನ್ನು ಓದಿ : ಪತ್ರಕರ್ತರ ಮೇಲೆ ಸಿಪಿಐ ದಬ್ಬಾಳಿಕೆ
ಗಾಂಜಾ ಮಾರುತ್ತಿದ್ದ ವ್ಯಕ್ತಿಗೆ ಕಠಿಣ ಶಿಕ್ಷೆ
ಕಾರಿನಿಂದ ಇಳಿಯಲು ಬಿಡದ ಸಾರ್ವಜನಿಕರು