ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ (Bhatkal) : ತಾಲೂಕಿನ ಅಳ್ವೆಕೋಡಿ (Alvekodi) ಅಳಿವೆ ತೀರದಲ್ಲಿ ನಿನ್ನೆ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಓರ್ವ ಮೀನುಗಾರ ಶವವಾಗಿ ಪತ್ತೆಯಾಗಿದ್ದಾನೆ.
ಇಂದು ಮಧ್ಯಾಹ್ನ ಹೊನ್ನೆಗದ್ದೆ(Honnegadde) ಕಡಲತೀರಕ್ಕೆ ಮೃತ ದೇಹ ತೇಲಿಬಂದಿದ್ದು ಸ್ಥಳೀಯ ಮೀನುಗಾರರು ಮೇಲಕ್ಕೆ ಎತ್ತಿದ್ದಾರೆ. ಜಾಲಿಯ ರಾಮಕೃಷ್ಣ ಮೊಗೇರ ಅವರ ದೇಹವಾಗಿದೆ.
ಬೆಳಿಗ್ಗೆಯಿಂದ ಮುಂಡಳ್ಳಿ ಹಾಗೂ ಅಳ್ವೆಕೋಡಿ ಸಮುದ್ರದಲ್ಲಿ ನೂರಾರು ಸಂಖ್ಯೆಯ ಮರ್ಗಿ(ಚಿಕ್ಕ ಪಾತಿದೋಣಿ) ಮತ್ತು ನಾಡದೋಣಿಗಳು ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ದೋಣಿ ಮಗುಚಿದ ಸ್ಥಳದಿಂದ ಶೋಧ ಕಾರ್ಯಾಚರಣೆ ಮುಂದುವರಿಸಿದ್ದರು.
ಇನ್ನೂ ಮೂವರು ಪತ್ತೆಯಾಗಬೇಕಿದ್ದು ಶೋಧ ಮುಂದುವರಿದಿದೆ. ಸತೀಶ ಮೊಗೇರ, ಗಣೇಶ ಮೊಗೇರ, ನಿಶ್ಚಿತ ಮೊಗೇರ ಸಿಗಬೇಕಾಗಿದೆ.
ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಅವರು ಮುಂಡಳ್ಳಿ ಹಾಗೂ ಅಳ್ವೆಕೋಡಿ ಪ್ರದೇಶಕ್ಕೆ ಭೇಟಿ ನೀಡಿ ಕಾರ್ಯಾಚರಣೆ ಪರಿಶೀಲಿಸಿದ್ದಾರೆ.
ಇದನ್ನು ಓದಿ : ಸೌಹಾರ್ಧದ ಹೆಸರಿಟ್ಟು ಹಣಕಾಸು ಸಂಸ್ಥೆಗಳಿಂದ ಸಾಲಗಾರರ ಲೂಟಿ. ಸಾಲಗಾರರ ಸಂಘ ಆಕ್ರೋಶ
ಕಾರವಾರದಲ್ಲಿ ಕೊಂಕಣ ರೈಲ್ವೆ ನೂತನ ಟ್ರಾಕ್ಷನ್ ಸಬ್‌ಸ್ಟೇಷನ್ ಕಾರ್ಯಾರಂಭ.