ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal) : ಸಾಂಪ್ರದಾಯಿಕ ಮೀನುಗಾರಿಕೆಗೆ(Traditional Fishing) ತೆರಳಿದ್ದ ನಾಡದೋಣಿಯೊಂದು ಮಗುಚಿದ ಪರಿಣಾಮವಾಗಿ ನಾಲ್ವರು ಮೀನುಗಾರರು ಕಣ್ಮರೆಯಾದ ಘಟನೆ ಅಳ್ವೆಕೋಡಿ-ತೆಂಗಿನಗುಂಡಿ (Alvekodi Fishing) ಭಾಗದ ಸಮುದ್ರ ತೀರದಲ್ಲಿ ಸಂಭವಿಸಿದೆ

ಜಾಲಿ ಮೂಲದ ಮನೋಹರ ಎಂಬುವವರ ನಾಡದೋಣಿಯಾಗಿದ್ದು ಒಟ್ಟು ಆರು ಜನ ಮೀನುಗಾರರು ಇಂದು ಮಧ್ಯಾಹ್ನ ಮೀನು ಹಿಡಿಯಲು ತೆರಳಿದ್ದರು. ಈ ವೇಳೆ ಕಡಲಿನ ಅಲೆಗೆ ದೋಣಿ ಮಗುಚಿ ಪಲ್ಟಿಯಾಗಿದೆ. ದೋಣಿಯಲ್ಲಿದ್ದವರು ನೀರು ಪಾಲಾದರು.

ದೋಣಿ ಮಾಲೀಕ ಜಾಲಿಯ ಮನೋಹರ ಮೊಗೇರ ಹಾಗೂ ಬೆಳ್ನಿ ಮೂಲದ ರಾಮ ಖಾರ್ವಿ ಎಂದು ತಿಳಿದು ಬಂದಿದೆ. ನಾಪತ್ತೆಯಾದ ಮೀನುಗಾರರನ್ನು ಜಾಲಿಕೊಡಿಯ ರಾಮಕೃಷ್ಣ ಮೊಗೇರ, ಅಳ್ವೇಕೋಡಿಯ ಸತೀಶ ಮೊಗೇರ, ಗಣೇಶ ಮೊಗೇರ, ನಿಶ್ಚಿತ ಮೊಗೇರ ಎಂದು ಮೂಲಗಳಿಂದ ತಿಳಿದು ಬಂದಿದೆ.

ಘಟನೆ ಸುದ್ದಿ ತಿಳಿದ ಸ್ಥಳೀಯ ಮೀನುಗಾರರು ತಮ್ಮ ದೋಣಿಗಳ ಮೂಲಕ ಸ್ಥಳಕ್ಕೆ ಧಾವಿಸಿ ನೀರು ಪಾಲಾದವರ ರಕ್ಷಿಸಲು ಕಾರ್ಯಾಚರಣೆ ನಡೆಸಿದರು. ಈ ಸಂದರ್ಭದಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ. ಇನ್ನೂ ನಾಲ್ವರು ನಾಪತ್ತೆಯಾಗಿದ್ದು ಶೋಧ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕರಾವಳಿ ಕಾವಲು ಪಡೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಗಮಿಸಿ ರಕ್ಷಣೆಗೊಳಗಾದವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನು ಓದಿ :   ಏಳುಬೆಟ್ಟ ಒಡೆಯನ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ಸಾಗುತ್ತಿರುವ ಗಣಪತಿ ನಾಯ್ಕ.

ಕಾರವಾರದಲ್ಲಿ ನಾಗರಪಂಚಮಿ ಸಂಭೃಮ. ಮಕ್ಕಳ ಕೈಲಿ ಹಾವು ನೀಡಿ ಅರಿವು.