ಉಡುಪಿ(UDUPI) : ಮೀನುಗಾರಿಕಾ ಕಾರ್ಮಿಕರಾಗಿ(FISHING LABOURS) ಉದ್ಯೋಗ ಆರಿಸಿಕೊಂಡು ಬಂದಿದ್ದ ಅಕ್ರಮ ವಲಸಿಗರನ್ನ ಮಲ್ಪೆ ಪೊಲೀಸರು(MALPE POLICE) ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ಮಲ್ಪೆ ವಡಬಾಂಡೇಶ್ವರ ಬಸ್ ನಿಲ್ದಾಣ ಬಳಿ ವಶಕ್ಕೆ ಪಡೆಯಲಾಗಿದ್ದು ಒಂಬತ್ತು ಮಂದಿ ಬಾಂಗ್ಲಾದೇಶಿಯರೆಂದು ಹೇಳಲಾಗುತ್ತಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ(MANGLORE INTERNATIONAL AIRPORT) ದುಬೈಗೆ (DUBAI)ತೆರಳಲು ಪ್ರಯತ್ನಿಸಿದ್ದ ಮಹಮ್ಮದ್ ಮಾಣಿಕ್ ಎಂಬಾತನ ವಿಚಾರಣೆಯಿಂದ ವಿಷಯ ಬಯಲಿಗೆ ಬಂದಿದೆ.

ಬಾಂಗ್ಲಾದೇಶದ ಇಮಿಗ್ರಷನ್(BANGLA COUNTRY IMIGRATION) ಅಧಿಕಾರಿಗಳ ಪರಿಶೀಲನೆ ವೇಳೆ ಈತ ಬಾಂಗ್ಲಾದೇಶದ ಮಾಣಿಕ್ ಚೌಕ್ ರಾಜಶಾಹಿ ಎಂದು ತಿಳಿದುಬಂದಿದೆ. ಈತನ ವಿಚಾರಣೆಯ ಬಳಿಕ ಮತ್ತೆ ಹಲವರು ಮಲ್ಪೆಯಲ್ಲಿರುವುದು ಪತ್ತೆಯಾಗಿದೆ.

ಇಸ್ಮಾಯಿಲ್, ಹಕೀಂ ಅಲಿ, ಸುಜೋನ್, ಕರೀಂ, ಸಲಾಂ, ರಾಜಿಕುಲ್, ಮೊಹಮ್ಮದ್ ಸೋಜಿಬ್, ಕಾಜೋಲ್, ಉಸ್ಮಾನ್ ಬಂಧಿತರು. ನಕಲಿ ಭಾರತೀಯ ದಾಖಲಾತಿ ಸೃಷ್ಟಿಸಿ ಪ್ರವೇಶಿಸಿದ್ದಾರೆ. ಆರೋಪಿಗಳ ಬಳಿ ನಕಲಿ ಆಧಾರ್ ಕಾರ್ಡ್ ಪತ್ತೆಯಾಗಿದೆ. ಆರೋಪಿಗಳಲ್ಲಿ ಸಿಕ್ಕಿಂ ಅಗರ್ತಲಾದ ಕಾಜೋಲ್ ಎಂಬಾತ ನಕಲಿ ಆಧಾರ್ ಕಾರ್ಡ್(ADHARA CARD) ಸೃಷ್ಟಿಸಿದ್ದಾನೆ. ಉಸ್ಮಾನ್ ಎಂಬುವವನು ಅಕ್ರಮವಾಗಿ ಕರೆತಂದು ಉದ್ಯೋಗಕ್ಕೆ ವ್ಯವಸ್ಥೆ ಮಾಡಿದ್ದಾನೆ. ಮಲ್ಪೆ ಪೊಲೀಸರು ವಶಕ್ಕೆ ಪಡೆದವರನ್ನ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನು ಓದಿ : ಆರೋಪಿಗಳ ಮೇಲೆ ಪೊಲೀಸರ ಪೈರಿಂಗ್

ಬೆಣಂದೂರು ಅರಣ್ಯದಲ್ಲಿ ಹಂತಕರು

ಭೀಕರ ರೈಲು ಅಪಘಾತ. ಬೋಗಿಗಳಿಗೆ ಬೆಂಕಿ.

ವಿಚಾರಣಧೀನ ಖೈದಿ ಆತ್ಮಹತ್ಯೆ ಯತ್ನ