ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಬಹುಮಹಡಿ ಕಟ್ಟಡ ನಿರ್ಮಿಸಿ ನಿಮಗೆ ಮನೆ ನೀಡುತ್ತೇನೆಂದು ಹೇಳಿದ ಆಸಾಮಿಯೊಬ್ಬ ತಮ್ಮ ಸಂಬಂಧಿಕರಿಗೆ, ಪರಿಚಯಸ್ಥರಿಗೆ ಮೋಸ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ರಾಜೇಶ್ ಹರಿಶ್ಚಂದ್ರ ಮಾಳಸೇಕರ ಎಂಬ ಬಿಲ್ಡರ್ ನ(Builder) ಮೋಸದ ಪುರಾಣಗಳ(Fraud Purana) ಬಗ್ಗೆ ಬಾಯಿಂದ ಬಾಯಿಗೆ ಪ್ರಚಾರವಾಗುತ್ತಿದೆ. ವಿಜಯನಗರದ ನಿವಾಸಿ ದೇವಿದಾಸ ಜಿ ಚಾಪೋಲಕರ ಎಂಬುವವರು ರಾಜೇಶ ಮಾಳ್ಸೆಕರ್ ಮಾಡಿದ ಮೋಸದ ಕಥೆಯನ್ನ(Story) ಮಾದ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ. ತಮಗೆ ಪತ್ನಿ ಹಾಗೂ ಗಂಡು ಮಕ್ಕಳಿಲ್ಲ. ಒಬ್ಬಂಟಿಯಾಗಿರುವ ನನ್ನನ್ನ ಪುಸಲಾಯಿಸಿ 4.8ಗುಂಟೆ ಜಾಗವನ್ನ ತನ್ನ ತಾಬಾ ಮಾಡಿಕೊಳ್ಳಲು ಪ್ರಯತ್ನಿಸಿದ್ದ. ಅಲ್ಲದೇ ತನ್ನ ಅಕ್ಕನ ಪ್ಲಾಟ್ ಖಾಲಿ ಇದ್ದು ಅಲ್ಲಿಯೇ ಸ್ವಲ್ಪ ದಿನ ಇರುವಂತೆ ತಿಳಿಸಿದ್ದ. ನಾನು ಉಳಿದುಕೊಂಡಿದ್ದ ಆ ಪ್ಲಾಟ್ ಗೆ ನಾನಿರದ ಸಮಯದಲ್ಲಿ ಬೀಗ(Lock) ಹಾಕಿ ಅಡುಗೆ ಸಾಮಾನು(Material), ಗ್ಯಾಸ್(Gas), ಕಪಾಟು(Almera), ಮಂಚ(Cot) , ಬಟ್ಟೆ(Cloth), ಬಂಗಾರವನ್ನ(Gold) ನಾಪತ್ತೆ ಮಾಡಿದ್ದಾಗಿ ದೇವಿದಾಸ್ ಗಂಭೀರ ಆರೋಪ ಮಾಡಿದ್ದಾರೆ. ಹೀಗೇಕೆ ಮಾಡಿದೆ ಅಂದ್ರೆ ಜೀವ ಬೆದರಿಕೆ(Threat) ಹಾಕಿದ್ದಾನೆ. ಹೀಗಾಗಿ ರಾಜೇಶ ಮೇಲೆ ಕಾನೂನು ಕ್ರಮಕ್ಕೆ ಅವರು ಆಗ್ರಹಿಸಿದ್ದಾರೆ.

ಬಾಬು ಹೂವಾ ಹರಿಕಂತ್ರರಿಗೆ 20 ಲಕ್ಷ ರೂ. ಹಣ ಮರುಪಾವತಿ ಮಾಡದೇ ಸತಾಯಿಸಿದ್ದಾನೆ. ಈ ಬಗ್ಗೆ ಕಾರವಾರ ನಗರಠಾಣೆಯಲ್ಲಿ(Karwar Town Station) ಮುಚ್ಚಳಿಕೆ ಬರೆದು ಹಣವನ್ನ ವಾಪಾಸ್ ನೀಡುತ್ತೇನೆಂದು ಹೇಳಿ ಮೋಸ ಮಾಡಿದ್ದಾನೆ.

ಸಂಜೀವ ಖಾರ್ವಿ ಎಂಬುವವರಿಗೆ ಬ್ಯಾಂಕ್ ಹರಾಜು(Bank Oction) ವಿಚಾರದಲ್ಲಿ ಮೋಸ ಮಾಡಲಾಗಿದೆ. ಅಲ್ಲದೇ ಯಲ್ಲಾಪುರದ(Yallapur) ನೀತಾ ಕವಳಿ ಎಂಬ ವಿಧವೆ ಮಹಿಳೆಯ(Widow) ಗಂಡನಿಂದ ಸುಮಾರು 40 ಲಕ್ಷ ರೂ. ಹಣ ಪಡೆದು ಕಾರವಾರದಲ್ಲಿ(Karwar) ಪ್ಲ್ಯಾಟ್ ನೀಡುತ್ತೇನೆಂದು ಭರವಸೆ ಹುಟ್ಟಿಸಿದ್ದ. ಆದರೆ ಏಳು ವರ್ಷವಾದರೂ ಹಣ ವಾಪಾಸ್(Money Returned) ನೀಡದೇ ಪ್ಲಾಟ್ ನೀಡದೇ ಮಹಾ ಮೋಸ ಮಾಡಿದ್ದಾನೆ. ಇದರಿಂದ ಆಕೆಯ ಮಗಳ ವಿದ್ಯಾಭ್ಯಾಸಕ್ಕೂ(Daughter Education) ತೊಂದರೆ ಮಾಡಿದ್ದಾನೆಂದು ಆರೋಪ ವ್ಯಕ್ತಪಡಿಸಿದ್ದಾರೆ.

ರಾಜೇಶ್ ಹರಿಶ್ಚಂದ್ರ ಮಾಳ್ಸೆಕರ್ ವಿರುದ್ಧ ಹಲವಾರು ಪ್ರಕರಣಗಳಿವೆ. ಪ್ರಕರಣ ದಾಖಲಿಸಿದವರ ಮೇಲೆ, ತನಿಖೆಗೆ ಹೋದ ಪೊಲೀಸರ ಮೇಲೂ ಸಹ ಯಲ್ಲಾಪುರ ಶಾಸಕರ(Yallapur MLA) ಹೆಸರು ಹೇಳಿಕೊಂಡು ಬೆದರಿಕೆ ಹಾಕುತ್ತಾನಂತೆ. ಹೀಗಾಗಿ ನ್ಯಾಯ ಕೋರಿ ಕಾರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ(Karwar Supredent Of Police) ದೇವಿದಾಸ ಚಾಪೋಲಕರ ದೂರು ಸಲ್ಲಿಸಿದ್ದಾರೆ. ದಯವಿಟ್ಟು ತಮಗೆ ನ್ಯಾಯ ಕೊಡಿಸಿ ಎಂದು ಪೊಲೀಸ್ ‌ಅಧಿಕಾರಿಗಳಲ್ಲಿ ಅಂಗಲಾಚಿದ್ದಾರೆ.

ಪೊಲೀಸ್ ಇಲಾಖೆ ಅಮಾಯಕರಿಗೆ ಮೋಸ ಮಾಡುತ್ತಿರುವ ಆತನ ಮೇಲೆ ಕ್ರಮ(Action) ಕೈಗೊಂಡು ಮುಂದೆ ಇನ್ನಷ್ಟು ಜನರು ಆತನಿಂದ ಮೋಸ(People Fraud) ಹೋಗುವುದನ್ನ ತಪ್ಪಿಸಬೇಕಾಗಿದೆ.

ಇದನ್ನು ಓದಿ : ಆನ್ಲೈನ್ ಟ್ರೇಡಿಂಗ್ ಹೆಸರಲ್ಲಿ‌ ವಂಚನೆ. ಇಬ್ಬರು‌ ಬ್ಯಾಂಕ್ ಅಧಿಕಾರಿ ಸೇರಿ ನಾಲ್ವರ ಬಂಧನ‌

ಭೀಕರ ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಸೇರಿ‌ ಮೂವರ ದುರ್ಮರಣ.

ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ಕಾರಿ ಬಸ್ ಪಲ್ಟಿ. 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಕೇಣಿ ಬಂದರು ವಿರೋಧಿಸಿ ಅಂಕೋಲಾ ಬಂದ್. ಅಣಕು ಶವ ಬೃಹತ್ ಯಾತ್ರೆ. ಆಕ್ರೋಶ…