ಕಾರವಾರ(KARWAR) : ಜಿಲ್ಲೆಯಲ್ಲಿ  ಸಾಮಾಜಿಕ ಮಾಧ್ಯಮದಲ್ಲಿ(SOCIAL MEDIA) ಸುಳ್ಳು ಸುದ್ದಿಗಳು(FAKE NEWS) ಹರಿದಾಡುತ್ತಿದ್ದು  ಸುಳ್ಳು ಸುದ್ದಿಗಳನ್ನು ಹರಡಿದವರ ಮೇಲೆ ಕ್ರಮಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಎಸ್‌ ಪಿ ನಾರಾಯಣ(SP NARAYAN) ಅವರು ಹೇಳಿದ್ದಾರೆ.

ಕಾರವಾರದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಸುಳ್ಳು ಹರಡಿದ್ದರಿಂದ ಹಲವರ ಘನತೆಗೆ ಧಕ್ಕೆ ಬಂದಿದೆ. ಈ ರೀತಿ ಫೇಕ್ ನ್ಯೂಸ್ ಮಾಡಿದರೆ ತನಿಖೆಯ ಜಾಡು ತಪ್ಪಲಿದೆ ಅಲ್ಲದೇ ಆರೋಪಿಗಳು ಪರಾರಿಯಾಗಲು ಅನುಕೂಲವಾಗಲಿದೆ. ಹೀಗಾಗಿ ತನಿಖೆಯ ಬಗ್ಗೆ ಪೊಲೀಸರು ಮಾಹಿತಿ ನೀಡುವವರೆಗೆ ಮಾಧ್ಯಮದವರೂ ಸಹ ಊಹಾಪೋಹಗಳ ಆಧಾರದ ಮೇಲೆ ವರದಿ ಮಾಡಬಾರದು  ಎಂದು ಮನವಿ ಮಾಡಿದರು.

ತನಿಖಾತಂಡಕ್ಕೆಬಹುಮಾನಘೋಷಣೆ. :
ಕಾರವಾರ ವಿಭಾಗದ ಹಣಕೋಣ ಉದ್ಯಮಿ ಕೊಲೆ ಮಾಡಿದ ಆರೋಪಿತರ ಬಗ್ಗೆ ಯಾವುದೇ ಸುಳಿವು ಇಲ್ಲದಿದ್ದರೂ ಅತ್ಯಂತ ಚಾಣಾಕ್ಷತೆಯಿಂದ ಅತೀ ಶೀಘ್ರವಾಗಿ ಪೊಲೀಸ್ ತಂಡ ಪ್ರಕರಣವನ್ನು ಭೇದಿಸಿದೆ.

ಹೆಚ್ಚುವರಿ ಎಸ್‌ಪಿ ಸಿ.ಟಿ. ಜಯಕುಮಾರ, ಹೆಚ್ಚುವರಿ ಪೊಲೀಸ ಅಧೀಕ್ಷಕರು-2 ಜಗದೀಶ ಎಂ., ಕಾರವಾರ ವಿಭಾಗದ ಡಿವೈಎಸ್‌ಪಿ ಎಸ್.ಎ ಗಿರೀಶ, ಸಿ.ಪಿ.ಐ ಕದ್ರಾ ವೃತ್ತ ಮತ್ತು ಪಿ.ಎ ಕಾರವಾರ ಗ್ರಾಮೀಣ ಠಾಣೆ, ಕಾರವಾರ ಶಹರ ಪೊಲೀಸ್ ಠಾಣೆಯ ಪಿಎಸ್‌ಐ ರಮೇಶ ಹೂಗಾರ, ಚಿತ್ತಾಕುಲ ಪಿಎಸ್ಐ ಮಹಾಂತೇಶ್ ವಾಲ್ಮೀಕಿ ಸೇರಿದಂತೆ ಎಲ್ಲಾ ಸಿಬ್ಬಂದಿಗೆ ಎಸ್‌ಪಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಈ ಕೊಲೆಯ ಪ್ರಕರಣವನ್ನು ಕ್ಷೇಪ್ರವಾಗಿ ಭೇದಿಸಿ ಆರೋಪಿತರನ್ನು ವಶಕ್ಕೆ ಪಡೆದ ಪೊಲೀಸರ ಸಾಧನೆಗೆ  ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕ ಅಲೋಕ ಮೋಹನ ಅವರು ತನಿಖಾ ತಂಡಕ್ಕೆ ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದಾರೆ.

ಇದನ್ನು ಓದಿ : ಭಟ್ಕಳ ಮತ್ತು ಕಾರವಾರದಲ್ಲಿ ಗ್ರಾಮ ಆಡಳಿತಧಿಕಾರಿಗಳ ಪ್ರತಿಭಟನೆ

ಸಿಎಂ ಸಿದ್ದರಾಮಯ್ಯ ಮತ್ತು ಶಾಸಕ ಸತೀಶ್ ಸೈಲ್ ಗೆ ಕೇರಳ ಸಿಎಂ ಧನ್ಯವಾದ.

ಕಾರವಾರ ಉದ್ಯಮಿಗಳಿಬ್ಬರ ದುರಂತ ಅಂತ್ಯ

ಶಿರೂರಿನಲ್ಲಿ ನಡೆಯದ ಪವಾಡ